Thursday, 12th December 2024

ರಸ್ತೆಯಲ್ಲಿ ವಾಹನ ಪುಶ್ ಮಾಡುವಂತೆ, ವಿಮಾನವನ್ನೂ ತಳ್ಳಿದ ವಿಡಿಯೋ ವೈರಲ್..

Nepal

ಕಾಠ್ಮಂಡು: ವಾಹನ ಸ್ಟಾರ್ಟ್ ಆಗದಿದ್ದರೆ ಸ್ವಲ್ಪ ತಳ್ಳುವುದನ್ನು ನೋಡಿರುತ್ತೀರಿ. ನೇಪಾಳದಲ್ಲಿ ಬಾಜುರಾ ವಿಮಾನ ನಿಲ್ದಾಣ ದಲ್ಲಿ ಈ ಘಟನೆ ನಡೆದಿದೆ.

ವಿಮಾನ ನಿಲ್ದಾಣದಲ್ಲಿ ರನ್ ವೇನಿಂದ ವಿಮಾನವನ್ನು ಜನರೆಲ್ಲ ಸೇರಿಕೊಂಡು ತಳ್ಳಿದ ವಿಡಿಯೋ ಹೆಚ್ಚು ವೈರಲ್ ಆಗಿದೆ.

ತಾರಾ ಏರ್ ಲೈನ್ಸ್ ಗೆ ಸೇರಿದ ವಿಮಾನದ ಟೈಯರ್ ಸ್ಪೋಟಗೊಂಡು ಏರ್ ಸ್ಟ್ರಿಪ್ ನಲ್ಲಿ ಸಿಲುಕಿಕೊಂಡಿದ್ದು, ಅಲ್ಲಿದ್ದ ಜನರೊಂದಿಗೆ ಸೇರಿ ನಿಲ್ದಾಣದ ಸಿಬ್ಬಂದಿ ವಿಮಾನವನ್ನು ತಳ್ಳಿದ್ದಾರೆ.

ಲ್ಯಾಂಡಿಂಗ್ ಸಂದರ್ಭದಲ್ಲಿ ಹಿಂದಿನ ಟೈಯರ್ ಸ್ಪೋಟಗೊಂಡಿದೆ. ಪೈಲಟ್ ಸುರಕ್ಷಿತ ವಾಗಿ ವಿಮಾನ ಇಳಿಸಿದರೂ, ರನ್ ವೇಯಿಂದ ವಿಮಾನವನ್ನು ಸರಿಸಲು ಸಾಧ್ಯವಾಗ ದಿದ್ದಾಗ ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನವನ್ನು ತಳ್ಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

https://twitter.com/i/status/1465991733959749634