Friday, 2nd June 2023

ಪೆಪ್ಸಿಕೊ ಕಂಪನಿಯ ಪೇಯ ಪೆಪ್ಸಿ ಲೊಗೊ ಬದಲಾವಣೆ

ನ್ಯೂಯಾರ್ಕ್: ಪೆಪ್ಸಿಕೊ ಕಂಪನಿಯ ಪ್ರಸಿದ್ಧ ಮೃದು ಪೇಯವಾದ ಪೆಪ್ಸಿ (ಸಾಪ್ಟ್ ಡ್ರಿಂಕ್) ತನ್ನ ಲೊಗೊ ಬದಲಾವಣೆ ಮಾಡಿದೆ.

2008ರ ನಂತರ 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೆಪ್ಸಿ ತನ್ನ ಬ್ರ್ಯಾಂಡ್ ಚಿನ್ಹೆಯನ್ನು ಬದಲಾವಣೆ ಮಾಡಿದೆ. ಈ ಹೊಸ ಬದಲಾವಣೆ ಸದ್ಯ ಅಮೆರಿಕದಲ್ಲಿ ಮಾತ್ರ ಜಾರಿಗೆ ಬರಲಿದೆ.

2024 ರಲ್ಲಿ ಕಂಪನಿಯ 125ನೇ ವರ್ಷಾಚರಣೆ ಪ್ರಯುಕ್ತ ಹೊಸ ಲೊಗೊ ಎಲ್ಲ ಕಡೆ ಜಾರಿಗೆ ಬರಲಿದೆ. ಇದು ಪೇಯದ ಬಾಟಲ್ ಮೇಲೆ ಸೇರಿದಂತೆ ಎಲ್ಲ ಉತ್ಪನ್ನಗಳಲ್ಲಿ ಇರಲಿದೆ ಎಂದು ತಿಳಿಸಿದೆ.

ಟ್ವೀಟ್ ಮಾಡಿರುವ ಪೆಪ್ಸಿಕೊ ಕಂಪನಿಯ ಸಿಇಒ ಟೊಡ್ ಕಪ್ಲಾನ್ ಅವರು, ಹೊಸ ಲೊಗೊವನ್ನು ಜಗತ್ತಿನೆದುರು ತೆರೆದಿಡುವಲ್ಲಿ ನಾವು ಉತ್ಸಾಹ ದಿಂದಿದ್ದೇವೆ. ಆಕರ್ಷಕವಾಗಿ ಮೂಡಿ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

1898 ರಲ್ಲಿ ಅಸ್ತಿತ್ವಕ್ಕೆ ಬಂದ ಪೆಪ್ಸಿ ಕಂಪನಿ ಹಲವು ಬಾರಿ ತನ್ನ ಲೊಗೊವನ್ನು ಬದಲಾಯಿಸಿದೆ.

error: Content is protected !!