Thursday, 12th December 2024

‘ಫಿಲಿಪ್ಸ್’ ಸಂಸ್ಥೆಯ 6,000 ಉದ್ಯೋಗಿಗಳ ವಜಾ

ಮ್‌ಸ್ಟರ್‌ಡಾಮ್‌: ಡಚ್ ತಂತ್ರಜ್ಞಾನ ಸಂಸ್ಥೆ ‘ಫಿಲಿಪ್ಸ್’ 6,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಸೋಮವಾರ ಘೋಷಿಸಿದೆ.

ಅರ್ಧದಷ್ಟು ಉದ್ಯೋಗ ಕಡಿತವನ್ನು ಮಾಡಲಾಗುವುದು. ಉಳಿದ ಅರ್ಧ ಉದ್ಯೋಗಿಗಳನ್ನು 2025ರ ವೇಳೆಗೆ ಕೆಲಸದಿಂದ ತೆಗೆಯಲಾಗುವುದು ಎಂದು ಕಂಪನಿ ಹೇಳಿದೆ.

‘ಸ್ಲೀಪ್‌ಆಪ್ನಿಯಾ’ ಎನ್ನಲಾಗುವ ನಿದ್ರೆಗೆ ಸಂಬಂಧಿಸಿದ ತೊಂದರೆಗೆ ಪರಿಹಾರವಾಗಿ ಫಿಲಿಪ್ಸ್‌ ಇತ್ತೀಚೆಗೆ ವೆಂಟಿಲೇಟರ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿತ್ತು. ಅದರಲ್ಲಿ ಬಳಸಲಾಗುವ ಫೋಮ್‌ (ನೊರೆಯಂಥ ವಸ್ತು) ವಿಷಕಾರಿ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಲಕ್ಷಾಂತರ ವೆಂಟಿಲೇಟರ್‌ಗಳನ್ನು ಹಿಂದಕ್ಕೆ ಪಡೆದಿದೆ. ಇದರ ನಷ್ಟವನ್ನು ತುಂಬಿಕೊಳ್ಳಲು ಸಂಸ್ಥೆಯ ಉದ್ಯೋಗಿಗಳ ಪ್ರಮಾಣವನ್ನು ಶೇ. 5ರಷ್ಟು ಕಡಿತ ಮಾಡುವ ಅಥವಾ 4,000 ಮಂದಿಯನ್ನು ಕೆಲಸದಿಂದ ತೆಗೆಯುವ ನಿರ್ಧಾರವನ್ನು ಕಳೆದ ಅಕ್ಟೋಬರ್‌ನಲ್ಲಿ ಕೈಗೊಂಡಿತ್ತು.