Monday, 23rd September 2024

PM Modi Tech CEOs Meet: ಟೆಕ್‌ ಕಂಪನಿಗಳ ಸಿಇಒಗಳ ಜತೆ‌ ಪ್ರಧಾನಿ ಮೋದಿ ಮಹತ್ವದ ಸಭೆ

PM Modi Tech CEOs Meet

ನ್ಯೂಯಾರ್ಕ್‌: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇಂದು ಅಮೆರಿಕದ15 ಟೆಕ್ ಕಂಪನಿಗಳ ಸಿಇಒಗಳ ಜತೆ ದುಂಡು ಮೇಜಿನ ಸಭೆ(PM Modi Tech CEOs Meet) ನಡೆಸಿ, ಸೆಮಿಕಂಡಕ್ಟರ್‌, ಕೃತಕ ಬುದ್ಧಿಮತ್ತೆ ಇತ್ಯಾದಿ ಬಗ್ಗೆ ಚರ್ಚಿಸಿದ್ದಾರೆ.

ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಈ ಸಭೆಯು ಪ್ರಧಾನಿ ಮೋದಿಯವರ ಮೂರು ದಿನಗಳ ಯುನೈಟೆಡ್ ಸ್ಟೇಟ್ಸ್ ಭೇಟಿಯ ಭಾಗವಾಗಿದೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸ್ಕೂಲ್ ಆಫ್ ಇಂಜಿನಿಯರಿಂಗ್ ಆಯೋಜಿಸಿದ ದುಂಡುಮೇಜಿನ ಸಭೆಯು ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಕಂಪನಿಗಳ ಸಿಇಒಗಳು ಈ ಸಭೆಯಲ್ಲಿ ಭಾಗಿಯಾಗಿ ಹಲವು ವಿಚಾರಗಳು ಹಂಚಿಕೊಂಡಿದ್ದಾರೆ.

ದುಂಡುಮೇಜಿನ ಸಭೆಯಲ್ಲಿ ಗೂಗಲ್‌ನ ಸುಂದರ್ ಪಿಚೈ ಎನ್ವಿಡಿಯಾದ ಜೆನ್ಸನ್ ಹುವಾಂಗ್ ಮತ್ತು ಅಡೋಬ್‌ನ ಶಾಂತನು ನಾರಾಯಣ್ ಅವರಂತಹ ಪ್ರಮುಖ ಸಿಇಒಗಳು ಭಾಗವಹಿಸಿದ್ದರು. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ನ್ಯೂಯಾರ್ಕ್‌ನಲ್ಲಿ ಟೆಕ್ ಸಿಇಒಗಳೊಂದಿಗೆ ಫಲಪ್ರದ ದುಂಡುಮೇಜಿನ ಸಭೆ ನಡೆಸಿದ್ದೇನೆ. ತಂತ್ರಜ್ಞಾನ, ನಾವೀನ್ಯತೆ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಾಗಿದೆ.

ಇನ್ನು ಸಭೆಯ ನಂತರ ಪ್ರತಿಕ್ರಿಯಿಸಿ ಗೂಗಲ್‌ ಸಿಇಒ ಸುಂದರ್‌ ಪಿಚೈ, ಪ್ರಧಾನಿಯವರು ಭಾರತವನ್ನು ಪರಿವರ್ತಿಸುವತ್ತ ಗಮನಹರಿಸಿದ್ದಾರೆ. ಇದು ಡಿಜಿಟಲ್ ಇಂಡಿಯಾ ದೃಷ್ಟಿ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: PM Modi and US: ಅ‍ದ್ಭುತ ಪ್ರದರ್ಶನದ ಮೂಲಕ ಅಮೆರಿಕದಲ್ಲಿ ಮೋದಿ ಮನಗೆದ್ದ ಭಾರತೀಯ ಕಲಾವಿದರು; ವೈರಲ್‌ ವಿಡಿಯೊ ಇಲ್ಲಿದೆ