Sunday, 22nd September 2024

PM Modi Visit US: ಬೈಡನ್‌ ದಂಪತಿಗೆ ಮೋದಿ ಭರ್ಜರಿ ಗಿಫ್ಟ್‌; ಎಲ್ಲರ ಗಮನ ಸೆಳೆದ ಬೆಳ್ಳಿಯ ರೈಲು ಮಾದರಿ

silver train

ವಾಷಿಂಗ್ಟನ್‌: ಅಮೆರಿಕ ಭೇಟಿಯ(PM Modi Visit US)  ಮೊದಲ ದಿನದಂದು ಕ್ವಾಡ್ ಲೀಡರ್ಸ್ ಶೃಂಗಸಭೆಯನ್ನು ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌(Joe Biden) ಅವರಿಗೆ ಬೆಳ್ಳಿಯ ಪುರಾತನ ರೈಲು(Silver train) ಮಾದರಿಯನ್ನು ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್‌ ಅವರಿಗೆ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದರು.

92.5 ರಷ್ಟು ಬೆಳ್ಳಿಯಿಂದ ಮಾಡಲಾದ ಪುರಾತನ ರೈಲು ಮಾದರಿಯು ಮಹಾರಾಷ್ಟ್ರದ ಕುಶಲಕರ್ಮಿಗಳು ತಯಾರಿಸಿದ್ದಾರೆ. ಈ ಅದ್ಭುತ ಕಲಾಕೃತಿಯಲ್ಲಿ ಕುಶಲಕರ್ಮಿಗಳ ಕೈಚಳಕ ಕಣ್ಮನ ಸೆಳೆದಿದೆ. ಈ ಮಾದರಿಯಲ್ಲಿ “ದೆಹಲಿ – ಡೆಲವೇರ್” ಎಂದು ಬರೆಯಲಾಗಿದೆ. ಇದಲ್ಲದೆ ಇಂಜಿನ್‌ನ ಬದಿಗಳಲ್ಲಿ ಭಾರತೀಯ ರೈಲ್ವೆ ಎಂದು ಬರೆಯಲಾಗಿದೆ. ಈ ಪೆಟ್ಟಿಗೆಗಳನ್ನು ಕೈಯಿಂದ ತಯಾರಿಸಲಾಗುತ್ತದೆ ಮತ್ತು ಕಾಗದ, ಅಂಟು ಮತ್ತು ನೈಸರ್ಗಿಕ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಪ್ರತಿ ಪೆಟ್ಟಿಗೆಯ ಮೇಲಿನ ಕಲಾಕೃತಿಗಳು ವಿಭಿನ್ನವಾಗಿದ್ದು, ಕಾಶ್ಮೀರಿ ಕಲೆಯನ್ನು ಪ್ರತಿಬಿಂಬಿಸುತ್ತದೆ.

ಜಿಲ್ ಬೈಡನ್‌ಗೂ ಮೋದಿ ಉಡುಗೊರೆ

ಪ್ರಧಾನಿ ಮೋದಿ ಅವರು ಅಮೆರಿಕದ ಪ್ರಥಮ ಮಹಿಳೆಗೆ ಪೇಪರ್ ಮ್ಯಾಚ್ ಬಾಕ್ಸ್‌ನಲ್ಲಿ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಸಾಧಾರಣ ಗುಣಮಟ್ಟದ ಮತ್ತು ಅನನ್ಯ ಸೌಂದರ್ಯದ ಪಶ್ಮಿನಾ ಶಾಲುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸಿದ್ಧಪಡಿಸಲಾಗಿದೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಉನ್ನತ ನಾಯಕರು ಕ್ವಾಡ್ ಸಭೆಯಲ್ಲಿ ಭಾಗವಹಿಸಿದ್ದಾರೆ.

ಮೂರು ದಿನದ ಭೇಟಿಗಾಗಿ ಅಮೆರಿಕಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಭರ್ಜರಿ ಸ್ವಾಗತ ದೊರಕಿದೆ. ನಿನ್ನೆ ಫಿಲಡೆಲ್ಫಿಯಾದ ವಿಮಾನ ನಿಲ್ದಾಣದಲ್ಲಿ ಇಳಿದ ಮೋದಿಗೆ ಅಲ್ಲಿನ ಅಧಿಕಾರಿಗಳು ಮೊದಲು ಸ್ವಾಗತ ಕೊಟ್ಟರೆ ಬಳಿಕ ಅವರನ್ನು ಭಾರತೀಯ ಮೂಲದ ನಿವಾಸಿಗಳು ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ನಿವಾಸಕ್ಕೆ ತೆರಳಿದ್ದು ಅಲ್ಲಿ ಅವರನ್ನು ಬೈಡೆನ್ ತಬ್ಬಿಕೊಂಡು ಸ್ವಾಗತಿಸಿದ್ದರು.

ಕ್ವಾಡ್ ಶೃಂಗಸಭೆಯಲ್ಲಿ ಮಾತನಾಡಿದ ಅವರು ಕ್ವಾಡ್(Quad summit) ಹಿಂದೆಂದಿಗಿಂತಲೂ ಹೆಚ್ಚು ಕಾರ್ಯತಂತ್ರವಾಗಿ ಒಗ್ಗೂಡಲ್ಪಟ್ಟಿದೆ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ವಿಲ್ಮಿಂಗ್ಟನ್‌ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಉಚಿತ, ಮುಕ್ತ ಮತ್ತು ಅಂತರ್ಗತ ವಿನಿಮಯ ಇಂಡೋ-ಪೆಸಿಫಿಕ್ ಕ್ವಾಡ್ ದೇಶಗಳ ಆದ್ಯತೆ ಮತ್ತು ಬದ್ಧತೆಯಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಕ್ವಾಡ್ ಶೃಂಗಸಭೆಯಲ್ಲಿ ಜೋ ಬಿಡೆನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಕೂಡ ಉಪಸ್ಥಿತರಿದ್ದರು. ಜಗತ್ತು ಉದ್ವಿಗ್ನತೆ ಮತ್ತು ಘರ್ಷಣೆಗಳಿಂದ ಸುತ್ತುವರಿದಿರುವ ಸಮಯದಲ್ಲಿ ಕ್ವಾಡ್ ಶೃಂಗಸಭೆಯನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ಆರಂಭಿಕ ಭಾಷಣದಲ್ಲಿ ಗಮನಸೆಳೆದರು.

ಈ ಸುದ್ದಿಯನ್ನೂ ಓದಿ: PM Modi Visit US: ಮೋದಿ-ಬೈಡನ್‌ ದ್ವಿಪಕ್ಷೀಯ ಮಾತುಕತೆ; ಯಾವೆಲ್ಲಾ ವಿಚಾರ ಚರ್ಚೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್