ಲಂಡನ್: ಪ್ರತಿಭಟನೆ ಹತ್ತಿಕ್ಕಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿರುವ ಮಸೂದೆಯನ್ನು ವಿರೋಧಿಸಿ ಲಂಡನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 10 ಮಂದಿ ಪೊಲೀಸರಿಗೆ ಗಾಯಗಳಾಗಿವೆ. 26 ಪ್ರತಿಭಟನಾಕಾರರನ್ನು ಬಂಧಿಸ ಲಾಗಿದೆ.
ಕಿಲ್ ದ ಬಿಲ್ ಹೆಸರಿನಲ್ಲಿ ಲಂಡನ್ನ ಕೇಂದ್ರ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಕೋಪಕ್ಕೆ ಹೋಗಿದೆ. ಬಂಧಿತ 26 ಮಂದಿ ವಿರುದ್ಧ ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿವೆ. ಮಹಿಳೆಯಿಂದ ಚಾಕುವಂತಹ ಮಾರಣಾಂತಿಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರತಿಭಟ ನಾ ನಿಯಂತ್ರಣದ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಕಮಾಂಡರ್ ಅಡೆ ತಿಳಿಸಿದ್ದಾರೆ.
ಕೇಂದ್ರ ಲಂಡನ್ನ ಸಂಸತ್ ವೃತ್ತದಲ್ಲಿ ಬಹಳಷ್ಟು ಜನ ಸಮಾವೇಶಗೊಂಡಿದ್ದರು. ಸಾಮಾಜಿಕ ಅಂತರದ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದರು. ಸ್ಥಳದಿಂದ ತೆರಳುವಂತೆ ಸವಿನಯ ಪ್ರಾರ್ಥನೆ ಮಾಡಿದರು. ಕೆಲವರು ಪೊಲೀಸರು ಮನವಿಯನ್ನು ಪರಿಗಣಿಸಿ ಹೊರಹೋಗಿದ್ದಾರೆ. ಸಣ್ಣ ಗುಂಪೊಂದು ತಮ್ಮ ಘೋಷಣೆ ಕೂಗುವುದನ್ನು ಮುಂದುವರೆಸಿ ಸಂಘರ್ಷಕ್ಕಿಳಿದಾಗ ಪೊಲೀಸರು ಬಲ ಪ್ರಯೋಗ ಮಾಡಬೇಕಾ ಯಿತು ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಪೊಲೀಸರಿಗೆ ಪ್ರತಿಭಟನೆಯನ್ನು ನಿಯಂತ್ರಿಸಲು ಹೆಚ್ಚಿನ ಅಧಿಕಾರ ನೀಡಲಾಗಿದೆ. ಜೊತೆಗೆ ನಿಯಮ ಉಲ್ಲಂಘಿಸಿ ದವರಿಗೆ 2500 ಪೌಂಡ್ ದಂಡ ವಿಧಿಸುವ ನಿರ್ಧಾರ ಕೂಡ ಕಾನೂನಿನಲ್ಲಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ