Friday, 22nd November 2024

ಅಮೆರಿಕಾದಲ್ಲಿ ಕಾನೂನುಬದ್ಧ ಗರ್ಭಪಾತದ ಹಕ್ಕು ರದ್ದು

ವಾಷಿಂಗ್ಟನ್​: ಕಳೆದ 50 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ರದ್ದುಕೊಳಿಸಲಾಗಿದೆ ಎಂದು ಅಮೆರಿಕಾದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾ ರವು ಚುನಾಯಿತ ಪ್ರತಿನಿಧಿಗಳು, ಜನರಿಗೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅಮೆರಿಕದಲ್ಲಿ 1973 ರಲ್ಲಿ ರೋಯ್ ವಿ ವೇಡ್ ಪ್ರಕರಣದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡುವ ಸಾಂವಿಧಾನಿಕ ಹಕ್ಕನ್ನು ನೀಡುವ ಮಹತ್ವದ ತೀರ್ಪು ನೀಡಲಾಗಿತ್ತು. ಅಂದಿನಿಂದ ಅಲ್ಲಿ ಗರ್ಭಪಾತ ವನ್ನು ಕಾನೂನು ಬದ್ಧಗೊಳಿಸಲಾಗಿತ್ತು.

ಆದರೆ, ಅನಿಯಂತ್ರಿತ ಗರ್ಭಪಾತಗಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿ ಣಾಮಗಳನ್ನು ಉಂಟು ಮಾಡಿತ್ತು. ಕಳೆದ ಕೆಲವು ವರ್ಷಗಳಿಂದ ಅಮೆರಿಕದ ಕೆಲವು ಭಾಗಗಳಲ್ಲಿ ಹೋರಾಡುತ್ತಿದ್ದು, ಗರ್ಭಪಾತದ ಹಕ್ಕನ್ನು ರದ್ದುಗೊಳಿಸ ಬೇಕೆಂದು ಒತ್ತಾಯಿಸುತ್ತಿದ್ದವು.

ಈ ಆದೇಶದಲ್ಲಿ ನೂರಾರು ಅಮೆರಿಕನ್ನರು ಸುಪ್ರೀಂಕೋರ್ಟ್ ಮುಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆಂದು ವರದಿಯಾಗಿದೆ.

ಸುಪ್ರೀಂಕೋರ್ಟ್ ತೀರ್ಪು ನೀಡಿದ ಸ್ವಲ್ಪ ಸಮಯದ ನಂತರ ಸುಮಾರು 25 ರಿಂದ 50 ರಾಜ್ಯಗಳು ಗರ್ಭಪಾತದ ಮೇಲೆ ನಿಷೇಧ ಘೋಷಿಸಿದವು. ಮಿಸೌರಿ ರಾಜ್ಯವು ಗರ್ಭಪಾತ ನಿಷೇಧಿಸಿದ ಮೊದಲ ರಾಜ್ಯವಾಯಿತು.

ಕೋರ್ಟ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಅಮೆರಿಕಕ್ಕೆ ಅತ್ಯಂತ ದುಃಖದ ದಿನವಾಗಿದೆ ಎಂದು ತಿಳಿಸಿದ್ದಾರೆ. ತೀರ್ಪು ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದೆ. ಮಹಿಳೆಯರ ಆರೋಗ್ಯ ಮತ್ತು ಜೀವನ ಅಪಾಯದಲ್ಲಿ ಬಿದ್ದಿದೆ ಎಂದು ಹೇಳಿದ್ದಾರೆ.