Thursday, 12th December 2024

ನೇಪಾಳ ಸಂಸತ್‌ ವಿಸರ್ಜನೆಗೆ ಸಿಕ್ಕಿತು ರಾಷ್ಟ್ರಪತಿ ಅನುಮೋದನೆ

ಕಠ್ಮಂಡು: ನೇಪಾಳ ಸಂಸತ್ತನ್ನು ವಿಸರ್ಜಿಸುವ ಪ್ರಧಾನಿ ಕೆರಿ ಶರ್ಮಾ ಒಲಿ ನೇತೃತ್ವ ಸಂಪುಟ ಸಭೆಯ ಶಿಫಾರಸ್ಸಿಗೆ ನೇಪಾಳ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ಭಾನುವಾರ ನಡೆದ ತುರ್ತು ಸಭೆಯಲ್ಲಿ ನೇಪಾಳದ ಕ್ಯಾಬಿನೆಟ್ ಈ ಶಿಫಾರಸು ಮಾಡಿದೆ. ಶಿಫಾರಸ್ಸಿಗೆ ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಅವರು ಅನುಮೋದನೆ ನೀಡಿದ್ದಾರೆ. ಮುಂದಿನ ವರ್ಷದ ಏಪ್ರಿಲ್ 30 ಮತ್ತು ಮೇ10ರಂದು ನೇಪಾಳ ದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ.

ತುರ್ತು ಸಂಪುಟ ಸಭೆಯಲ್ಲಿ ಸಂಸತ್ತನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ಇಂಧನ ಸಚಿವ ಬರ್ಸಮನ್ ಪುನ್ ತಿಳಿಸಿದರು.