Thursday, 14th November 2024

ಟ್ರಂಪ್‌ ಪರ ಬೆಂಬಲಿಗರ ಪ್ರತಿಭಟನೆ, 52 ಬೆಂಬಲಿಗರ ಬಂಧನ

ಅಮೆರಿಕಾ: ಕ್ಯಾಪಿಟಲ್ ಮೈದಾನದಲ್ಲಿನ ಟ್ರಂಪ್‌ ಪರ ಬೆಂಬಲಿಗರ ಪ್ರತಿಭಟನೆ, ಗಲಾಟೆಯ ವೇಳೆಯಲ್ಲಿ ನಾಲ್ವರು ಸಾವ ನ್ನಪ್ಪಿದ್ದು, ಪ್ರತಿಭಟನೆಯಲ್ಲಿ ನಿರತರಾಗಿದ್ದಂತ 52 ಬೆಂಬಲಿಗರನ್ನು ಬಂಧಿಸಲಾಗಿದೆ.

ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ಮುಖ್ಯಸ್ಥ ರಾಬರ್ಟ್ ಜೆ ಕಾಂಟಿ ಮಾಹಿತಿ ನೀಡಿದ್ದು, ಕ್ಯಾಪಿಟಲ್ ಮೈದಾನದಲ್ಲಿನ ಪ್ರತಿಭಟನೆ, ಗಲಾಟೆಯ ವೇಳೆ ಇದುವರೆಗೆ ನಾಲ್ವರು ಸಾವನ್ನಪ್ಪಿದ್ದು, 52 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಮೇರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಪ್ರತಿಭಟನೆ ತಾರಕಕ್ಕೇರಿದೆ. ಅಧ್ಯಕ್ಷ-ಚುನಾಯಿತ ಜೋ ಬಿಡೆನ್ ಅವರ ಚುನಾವಣಾ ಗೆಲುವನ್ನು ಕಾಂಗ್ರೆಸ್ ಗೆ ತಡೆಯೊಡ್ಡಲು ಅಭೂತಪೂರ್ವ ಪ್ರಯತ್ನ ನಡೆಸಲಾಗಿದೆ.

ತಡರಾತ್ರಿ ನಡೆದ ಸುದ್ದಿಗೋಷ್ಟಿಯಲ್ಲಿ ಮೇಯರ್ ಮುರಿಯೆಲ್ ಬೌಸರ್ ಅವರು ಕರ್ಫ್ಯೂ ಉಲ್ಲಂಘನೆಗಳಾಗಿ, ಯು.ಎಸ್ ಕ್ಯಾಪಿಟಲ್ ಮೈದಾನದಲ್ಲಿ ಬಂಧಿಸಲ್ಪಟ್ಟಿರುವ 52 ಜನರನ್ನು ಬಂಧಿಸಲಾಗಿದೆ ಎಂದು ಕಾಂಟಿ ಹೇಳಿದ್ದಾರೆ. ಪರವಾನಗಿ ಇಲ್ಲದ ಅಥವಾ ನಿಷೇಧಿತ ಬಂದೂಕುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇನ್ನೂ ಹಲವರನ್ನು ಬಂಧಿಸಲಾಗಿತ್ತು.