Thursday, 12th December 2024

ಹನುಮಾನ್ ಪ್ರತಿಮೆ ವಿರುದ್ಧ 25 ಮಂದಿ ಕ್ರಿಶ್ಚಿಯನ್ನರ ಪ್ರತಿಭಟನೆ

ಟೆಕ್ಸಾಸ್‌: ಟೆಕ್ಸಾಸ್‌ನಲ್ಲಿ ಅತಿ ಎತ್ತರದ ಪ್ರತಿಮೆ ಮತ್ತು ಯುಎಸ್‌ನಲ್ಲಿ ಮೂರನೇ ಅತಿ ಎತ್ತರದ ಪ್ರತಿಮೆ ಮೆಚ್ಚುಗೆ ಮತ್ತು ವಿವಾದ ಎರಡನ್ನೂ ಸೆಳೆದಿದೆ.

ಪಾಸ್ಟರ್ ಗ್ರೆಗ್ ಗೆರ್ವೈಸ್ ನೇತೃತ್ವದಲ್ಲಿ ಸುಮಾರು 25 ಮಂದಿ ಕ್ರಿಶ್ಚಿಯನ್ನರ ಗುಂಪು ಇತ್ತೀಚೆಗೆ ಹನುಮಾನ್ ಪ್ರತಿಮೆಯ ವಿರುದ್ಧ ಪ್ರತಿಭಟನೆ ನಡೆಸಿತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹನುಮಂತನನ್ನು “ರಾಕ್ಷಸ ದೇವರು” ಎಂದು ಉಲ್ಲೇಖಿಸಿದ್ದು, ಹಿಂದೂ ಸಮುದಾ ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ಪ್ರತಿಭಟನಕಾರರು ದೇವಾಲಯವನ್ನು ಸಮೀಪಿಸಿ, “ಯೇಸು ಒಬ್ಬನೇ ಸತ್ಯ ದೇವರು” ಎಂದು ಘೋಷಿಸಿದರು. “ಎಲ್ಲಾ ಸುಳ್ಳು ದೇವರುಗಳು ನೆಲಕ್ಕೆ ಸುಟ್ಟುಹೋಗಲಿ” ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದಾಗ ಪರಿಸ್ಥಿತಿ ಉಲ್ಬಣಗೊಂಡಿತು.