ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಕಳೆದ ವಾರ ಲಾಹೋರ್‌ನ ಕೋಟ್ ಲಖ್ಪತ್ ಜೈಲು ಮತ್ತು ರಂಜಾನ್ ಬಜಾರ್‌ಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಪಿಟಿವಿಯ ಸಿಬ್ಬಂದಿ ಕಾರ್ಯಕ್ರಮವನ್ನು ಚಿತ್ರೀಕರಿಸಿ ಅದನ್ನು ಫೈಲ್ ಟ್ರಾನ್ಸ್ ಫರ್ ಪ್ರೋಟೋಕಾಲ್ ಮೂಲಕ ವೀಡಿಯೊ ತುಣುಕನ್ನು ಅಪ್‌ಲೋಡ್ ಮಾಡಲು ವಿಫಲರಾಗಿದ್ದರು. ಅಗತ್ಯವಾದ ಸುಧಾರಿತ ಲ್ಯಾಪ್ ಟಾಪ್ ಲಭ್ಯವಿಲ್ಲದ ಕಾರಣ ಈ ಸಮಸ್ಯೆ ಏರ್ಪಟ್ಟಿತ್ತು.
ಪಾಕಿಸ್ತಾನ ಟೆಲಿವಿಷನ್ ತಂಡವು ಸರಿಯಾದ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಸಂಸ್ಥೆಯ 17 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಲಾ ಗಿದೆ.
ವರದಿಗಾರರು ಮತ್ತು ನಿರ್ಮಾಪಕರನ್ನು ಒಳಗೊಂಡ ವಿವಿಐಪಿ ತಂಡವು ಪ್ರಧಾನ ಮಂತ್ರಿಯ ಕವರೇಜ್ ಜವಾಬ್ದಾರಿಯನ್ನು ಹೊಂದಿದೆ. ಆ ತಂಡವು ಆಧುನಿಕ ಗ್ಯಾಜೆಟ್, ಲೈವ್ ಸ್ಟ್ರೀಮಿಂಗ್ಗಾಗಿ ಲ್ಯಾಪ್ಟಾಪ್ಗಳನ್ನು ಹೊಂದಿದ್ದು, ಪ್ರಧಾನಮಂತ್ರಿ ಯವರ ಕಾರ್ಯಕ್ರಮಗಳ ಪ್ರಸಾರದ ಜವಾಬ್ದಾರಿ ತಂಡದ ಸದಸ್ಯರ ಮೇಲಿರುತ್ತದೆ ಎನ್ನಲಾಗಿದೆ.
ಈ ತಂಡವು ಇಸ್ಲಾಮಾಬಾದ್ನಲ್ಲಿ ನೆಲೆಸಿದ್ದು, ದೇಶ ಮತ್ತು ವಿದೇಶದಾದ್ಯಂತ ಪ್ರಧಾನಿಯ ಕಾರ್ಯಕ್ರಮಗಳಿಗೆ ಪ್ರವಾಸ ಮಾಡುತ್ತದೆ. ಪ್ರಧಾನಿ ಭೇಟಿಯ ಬಗ್ಗೆ ಪಿಟಿವಿ ಲಾಹೋರ್ ಕೇಂದ್ರವು ಸುಧಾರಿತ ಲ್ಯಾಪ್ಟಾಪ್ ನೀಡುವಂತೆ ಪಿಟಿವಿ ಪ್ರಧಾನ ಕಚೇರಿಗೆ ಏಪ್ರಿಲ್ 18 ರಂದು ಪ್ರಧಾನ ಕಚೇರಿಗೆ ಪತ್ರ ಬರೆದಿತ್ತು.