Friday, 13th December 2024

ರಷ್ಯಾಧ್ಯಕ್ಷ ಪುಟಿನ್’ಗೆ ಕ್ಯಾನ್ಸರ್ ಚಿಕಿತ್ಸೆ

ಮಾಸ್ಕೋ(ರಷ್ಯಾ): ವ್ಲಾಡಿಮಿರ್ ಪುಟಿನ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.

ಹೀಗಾಗಿ, ಅಧಿಕಾರವನ್ನು ತಾತ್ಕಾಲಿಕವಾಗಿ ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರು ಶೇವ್ ಅವರಿಗೆ ಹಸ್ತಾಂತರಿಸಲಿದ್ದಾರೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಪುಟಿನ್‌ಗೆ ಸ್ವಲ್ಪ ಸಮಯದ ವಿಶ್ರಾಂತಿ ಬೇಕಾಗಬಹುದು.

ಕೆಲವು ದಿನಗಳ ಹಿಂದೆ ಪುಟಿನ್ ಅವರು ನಿಕೊಲಾಯ್ ಪಟ್ರುಶೆವ್ ಅವರೊಂದಿಗೆ ಎರಡು ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದರು. ಪಟ್ರುಶೆವ್ ಅವರನ್ನು ಏಕೈಕ ವಿಶ್ವಾಸಾರ್ಹ ಮಿತ್ರ ಮತ್ತು ಸರ್ಕಾರದಲ್ಲಿ ಸ್ನೇಹಿತ ಎಂದು ಪುಟಿನ್ ಪರಿಗಣಿಸುತ್ತಾರೆ.

ಆದರೆ, ದೀರ್ಘಕಾಲದವರೆಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ದೇಶದ ನಿಯಂತ್ರಣವು ಹೆಚ್ಚೆಂದರೆ ಎರಡರಿಂದ ಮೂರು ದಿನಗಳ ಕಾಲ ಪಟ್ರುಶೇವ್ ಅವರ ಕೈಯಲ್ಲಿರಬಹುದಷ್ಟೇ.