Sunday, 15th December 2024

ಅಮೆರಿಕದ EPA ಮುಖ್ಯಸ್ಥರಾಗಿ ಭಾರತೀಯ ಜಲ ತಜ್ಞೆ ಆಯ್ಕೆ

ವಾಷಿಂಗ್ಟನ್: ಅಮೆರಿಕಾ ಪರಿಸರ ಸಂರಕ್ಷಣಾ ಏಜನ್ಸಿಯ ನೀರು ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಮೂಲದ ಜಲ ತಜ್ಞೆ ರಾಧಿಕಾ ಫಾಕ್ಸ್ ನಿಯೋಜನೆಗೊಂಡಿದ್ದಾರೆ.

ಫಾಕ್ಸ್ ಆಯ್ಕೆಗೆ ಸೆನೆಟ್‍ನಲ್ಲಿ ನಡೆದ ಮತದಾನದಲ್ಲಿ 55 ಸದಸ್ಯರಲ್ಲಿ 43 ಸದಸ್ಯರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಏಳು ಮಂದಿ ರಿಪಬ್ಲಿಕನ್ ಸೆನೆಟರ್‍ಗಳು ಫಾಕ್ಸ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಇಬ್ಬರು ಡೆಮಾಕ್ರಟಿಕ್ ಸೆನೆಟರ್‍ಗಳು ಮತದಾನದಿಂದ ದೂರ ಉಳಿದಿದ್ದರು.