Sunday, 15th December 2024

ಅಸೆಂಬ್ಲಿ ಸ್ಪೀಕರ್ ಆಗಿ ರಾಜಾ ಪರ್ವೈಜ್ ಅಶ್ರಫ್ ಆಯ್ಕೆ

ಇಸ್ಲಾಮಾಬಾದ್: ಮಾಜಿ ಪ್ರಧಾನಿ ರಾಜಾ ಪರ್ವೈಜ್ ಅಶ್ರಫ್ ಅವರು ಅಸೆಂಬ್ಲಿ ಸ್ಪೀಕರ್ ಆಗಿ ಆಯ್ಕೆ ಯಾಗಿದ್ದಾರೆ.

ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಕಾರಣ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಯಿಂದ 71 ವರ್ಷದ ಅಶ್ರಫ್ ಅವರು ಚುನಾಯಿತರಾಗಿ ಆಯ್ಕೆಯಾದ ನಂತರ ಪ್ರಮಾಣ ವಚನ ಸ್ವೀಕರಿಸಿದರು.

ಅಸದ್ ಕೈಸರ್ ರಾಜೀನಾಮೆ ನೀಡಿದ ನಂತರ, ಏ.3 ರಂದು ಈ ಸ್ಥಾನವು ತೆರವಾಗಿತ್ತು.

ʻನಾನು ಸಂವಿಧಾನಕ್ಕೆ ಜವಾಬ್ದಾರನಾಗಿದ್ದೇನೆ ಮತ್ತು ಪಾಕಿಸ್ತಾನದ ಸಾರ್ವಭೌಮತೆ ಮತ್ತು ಸಮಗ್ರತೆ ಯನ್ನು ರಕ್ಷಿಸುವುದು ಪ್ರಮಾಣವಚನದ ಪ್ರಮುಖ ಬೇಡಿಕೆಯಾಗಿದೆʼ ಎಂದು ಅಶ್ರಫ್ ಹೇಳಿದರು.

ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಪ್ರಾರಂಭವಾಗುವ ಒಂದು ಗಂಟೆಯ ಮೊದಲು ಖಾಸಿಂ ಸೂರಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಉಪ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ರಾಜೀನಾಮೆಯ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸುವ ತೀರ್ಪಿನ ಬಗ್ಗೆ ಖಾಸಿಮ್ ಸೂರಿ ತೀವ್ರ ಟೀಕೆಗಳನ್ನು ಎದುರಿಸಿದರು. ಏ.16 ರಿಂದ ಏಪ್ರಿಲ್ 22 ರವರೆಗೆ ಎನ್‌ಎ ಸ್ಪೀಕರ್ ಚುನಾವಣೆಗೆ ನಿಗದಿಯಾಗಿದ್ದ ಅಧಿವೇಶನ ಮುಂದೂಡುವ ಅವರ ನಿರ್ಧಾರ ವಿಳಂಬ ತಂತ್ರ ಎನ್ನಲಾಗಿದೆ.