Saturday, 14th December 2024

ಅಮೆರಿಕ ರಕ್ಷಣಾ ಇಲಾಖೆಯ ಪ್ರಮುಖ ಹುದ್ದೆಗೆ ರವಿ ಚೌಧರಿ ನಾಮನಿರ್ದೇಶನ

ವಾಷಿಂಗ್ಟನ್‌: ಭಾರತೀಯ ಅಮೆರಿಕನ್ ರವಿ ಚೌಧರಿ ಅವರನ್ನು ಅಮೆರಿಕ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ಘೋಷಿಸಿದ್ದಾರೆ.

ಅಮೆರಿಕದ ವಾಯುಪಡೆಯ ನಿವೃತ್ತ ಅಧಿಕಾರಿ ಚೌಧರಿ ಅವರನ್ನು ವಾಯುಪಡೆಯಲ್ಲಿನ ಇಂಧನ ಮತ್ತು ಪರಿಸರ ವಿಭಾಗದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ. ಅಮೆರಿಕ ಸೆನೆಟ್‌ನಿಂದ ದೃಢೀಕರಣ ಪಡೆದ ನಂತರ, ರವಿ ಚೌಧರಿ ಅವರು ಪೆಂಟಗನ್‌ನ ಈ ಪ್ರಮುಖ ಹುದ್ದೆಯ ಅಧಿಕಾರ ಸ್ವೀಕರಿಸಲಿದ್ದಾರೆ.

ಚೌಧರಿ ಈ ಹಿಂದೆ ಅಮೆರಿಕದ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು.