Thursday, 3rd October 2024

ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ಮುನ್ನಡೆ

ಲಂಡನ್: ಬ್ರಿಟನ್ ನೂತನ ಪ್ರಧಾನ ಮಂತ್ರಿ ಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು ಕನ್ಸರ್ವೇ ಟಿವ್ ಪಕ್ಷದ ಸಂಸದರ ಮೊದಲ ಸುತ್ತಿನ ಮತದಾನದಲ್ಲಿ 88 ಮತ ಗಳಿಸುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.

ಭಾರತೀಯ ಮೂಲದ ಮತ್ತೊಬ್ಬ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲೇ ಬ್ರೆವರ್ಮನ್ ಅವರು 32 ಮತಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ, ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ (67 ಮತಗಳು), ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (50 ಮತಗಳು), ಮಾಜಿ ಸಚಿವ ಕೆಮಿ ಬಡೆನೋಚ್ (40 ಮತಗಳು) ಮತ್ತು ಟಾಮ್ ತುಗೆಂಧತ್ (37 ಮತಗಳು).

ಚಾನ್ಸೆಲರ್ ನಮ್ ಜಹಾವಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಅವರು ಕ್ರಮವಾಗಿ 25 ಮತ್ತು 18ಮತ ಪಡೆದು ಕನಿಷ್ಠ 30 ಸಂಸದರ ಅಗತ್ಯ ಮತಗಳನ್ನು ಸೆಳೆ ಯಲು ಸಾಧ್ಯವಾಗದ ಕಾರಣ ರೇಸ್‍ನಿಂದ ಹೊರಗುಳಿದಿದ್ದಾರೆ.

42 ವರ್ಷದ ಸುನಕ್ ಅವರು ಕಳೆದ ವಾರ ಪಕ್ಷದ ನಾಯಕತ್ವಕ್ಕೆ ಸ್ಫರ್ಧಿಸುವ ಇಂಗಿತ ಘೋಷಿಸಿದಾಗಿನಿಂದ ಅವರ ಸಂಸದೀಯ ಸಹೋದ್ಯೋಗಿಗಳಲ್ಲಿ ಸ್ಥಿರವಾದ ಮುನ್ನಡೆ ಕಾಯ್ದುಕೊಂಡಿದ್ದರೆ.