Thursday, 12th December 2024

ಸಿಐಸಿ ಸಮಿತಿಯ ಡೆಮಾಕ್ರಟಿಕ್‌ ಉಪಾಧ್ಯಕ್ಷರಾಗಿ ಸಂಸದ ರೋ ಖನ್ನಾ ನಾಮನಿರ್ದೇಶನ

ವಾಷಿಂಗ್ಟನ್‌: ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಸಿಲಿಕಾನ್‌ವ್ಯಾಲಿಯನ್ನು ಪ್ರತಿನಿಧಿಸುವ ಭಾರತೀಯ- ಅಮೆರಿಕನ್‌ ಸಂಸದ ರೋ ಖನ್ನಾ ಅವರನ್ನು ಸಿಐಸಿ ಸಮಿತಿಯ ಡೆಮಾಕ್ರಟಿಕ್‌ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.

1994ರಲ್ಲಿ ರಚನೆಯಾದ ಈ ಸಮಿತಿಗೆ ಖನ್ನಾರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಖನ್ನಾ ಅವರು ಸಿಲಿಕಾನ್‌ ವ್ಯಾಲಿಯಿಂದ ಮೂರು ಬಾರಿ ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್‌, ಅಮೆರಿಕದ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಆ ಸ್ಥಾನಕ್ಕೆ ಖನ್ನಾ ಅವರು ಸಂಭ್ಯಾವ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತಿದೆ.