ಕೀವ್: ಒಂದು ಸಾವಿರಕ್ಕೂ ಹೆಚ್ಚು ಶಾಲೆಗಳ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದ್ದು, 95 ಶಾಲೆ ಗಳನ್ನು ನಾಶಪಡಿಸಿದೆ ಎಂದು ಉಕ್ರೇನಿಯನ್ ಸರ್ಕಾರ ವರದಿ ಹೇಳಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ವಿಶ್ವದ ವಿವಿಧ ರಾಷ್ಟ್ರಗಳ ಪ್ರಾಸಿಕ್ಯೂಟರ್ ಗಳು ಮತ್ತು ಉಕ್ರೇನ್ ಪ್ರಾಸಿಕ್ಯೂಟರ್ ಜನರಲ್ ಗಳು ಉಕ್ರೇನ್ ನಲ್ಲಿನ ಸಂಭಾವ್ಯ ಯುದ್ಧಾಪರಾಧಗಳ 8,000ಕ್ಕೂ ಹೆಚ್ಚು ವರದಿಗಳ ತನಿಖೆ ನಡೆಸುತ್ತಿದ್ದಾರೆ.
ಆಸ್ಪತ್ರೆಗಳು, ವಸತಿ ಕಟ್ಟಡಗಳಂತಹ ನಾಗರಿಕ ನಿರ್ಮಾಣಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುವ ಗುರಿ ಹೊಂದಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ.