Saturday, 7th September 2024

ನ್ಯೂಯಾರ್ಕ್‌ನಲ್ಲಿ ಲೇಖಕ ಸಲ್ಮಾನ್ ರಶ್ದಿ ಮೇಲೆ ಹಲ್ಲೆ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಲೇಖಕ ಸಲ್ಮಾನ್ ರಶ್ದಿ ಉಪನ್ಯಾಸ ನೀಡಲು ತೆರಳಿದ ವೇಳೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಲೇಖಕರು ಈ ಹಿಂದೆ ಬರೆದಿರುವ ಬರಹಗಳಿಂದಾಗಿ ಕೊಲೆ ಬೆದರಿಕೆಗಳನ್ನು ಎದುರಿಸಿದ್ದು, ಶುಕ್ರವಾರ ನಡೆದ ದಾಳಿಯ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಚೌಟೌಕ್ವಾ ಇನ್ಸ್ಟಿಟ್ಯೂಷನ್ನಲ್ಲಿ ವೇದಿಕೆಯ ಮೇಲೆ ದಾಳಿ ನಡೆಸಲಾಗಿದೆ.

ದಾಳಿಕೋರನು ಲೇಖಕ ಸಲ್ಮಾನ್ ರಶ್ದಿಗೆ ಬಲವಾಗಿ ಗುದ್ದಿದ್ದು, ಚಾಕುವಿನಿಂದ ಇರಿಯಲು ಯತ್ನಿಸಿದನು. ಈ ವೇಳೆ ಅವರು ನೆಲಕ್ಕೆ ಉರುಳಿ ಬಿದ್ದರು, ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿಯು ದಾಳಿಕೋರನನ್ನು ವಶಕ್ಕೆ ಪಡೆದು ಕೊಂಡರು.

ಸಲ್ಮಾನ್ ರಶ್ದಿ ಜೀವಂತವಾಗಿದ್ದು, ಅವರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮೂಲಕ ಸ್ಥಳಾಂತರಿಸಲಾಗಿದೆ. ಈ ಕಾರ್ಯಕ್ರಮ ಆಯೋ ಜಕರ ಮೇಲೆಯೂ ದಾಳಿ ನಡೆಸಲಾಗಿದೆ; ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ.

75 ವರ್ಷದ ಸಲ್ಮಾನ್ ತಮ್ಮ ಬರಹಕ್ಕಾಗಿ ಹಲವು ಬಾರಿ ಜೀವ ಬೆದರಿಕೆಗಳನ್ನು ಎದುರಿಸಿದ್ದಾರೆ. ವಿಶೇಷವಾಗಿ 1980ರ ದಶಕದ ಉತ್ತರಾರ್ಧದಲ್ಲಿ ಅವರ ‘ದಿ ಸೈಟಾನಿಕ್ ವರ್ಸಸ್’ ಪುಸ್ತಕದಿಂದಾಗಿ ಬೆದರಿಕೆಗಳನ್ನು ಎದುರಿಸಿದ್ದರು.

ಪುಸ್ತಕದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಧರ್ಮನಿಂದನೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದನ್ನು ಇರಾನ್‌ನಲ್ಲಿ 1988 ರಿಂದ ನಿಷೇಧಿಸಲಾಗಿತ್ತು.

ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಆಗಿರುವ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮೊದಲ ಕಾದಂಬರಿ 1975ರಲ್ಲಿ ಹೊರ ಬಂದಿತ್ತು.

error: Content is protected !!