Friday, 20th September 2024

ಸತ್ಯಾ ನಾಡೆಳ್ಳಾಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

ಸ್ಯಾನ್‌ಫ್ರಾನ್ಸಿಸ್ಕೋ: ಮೆರಿಕ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾಡೆಳ್ಳಾ ಅವರಿಗೆ ಭಾರತದ ಕಾನ್ಸುಲ್ ಜನರಲ್ ಡಾ. ಟಿ. ವಿ ನಾಗೇಂದ್ರ ಪ್ರಸಾದ್ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ತಾಂತ್ರಿಕವಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಭಾರತೀಯ ಜನರೊಂದಿಗೆ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ಕಳೆದ ವರ್ಷ ಘೋಷಿಸಲಾದ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ 55 ವರ್ಷದ ಸತ್ಯಾ ನಾಡೆಳ್ಳಾ ಅವರಿಗೆ ಭಾರತ ಸರ್ಕಾರವು ಪದ್ಮ ಭೂಷಣ ಪ್ರಶಸ್ತಿಯನ್ನು ಹೆಸರಿಸಿದೆ. ಕಳೆದ ವಾರ ಪ್ರಶಸ್ತಿಯನ್ನು ಸ್ವೀಕರಿಸಿರುವ ಸತ್ಯಾ ನಾಡೆಳ್ಳಾ ಅವರು ಮುಂದಿನ ಜನವರಿ ತಿಂಗಳಲ್ಲಿ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

ಈ ಪ್ರಶಸ್ತಿ ಸ್ವೀಕರಿಸಲು ಖುಷಿಯಾಗುತ್ತಿದೆ. ರಾಷ್ಟ್ರಪತಿ, ಪ್ರಧಾನಿ ಮತ್ತು ಭಾರತದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ತಾಂತ್ರಿಕ ವಾಗಿ ಹೆಚ್ಚಿನದನ್ನು ಸಾಧಿಸುವುದಕ್ಕಾಗಿ ನಾನು ಭಾರತೀಯ ಜನರೊಂದಿಗೆ ಸೇರಿಕೊಂಡಲು ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ತಿಳಿಸಿದರು.ಹೈದ್ರಾಬಾದ್ ಮೂಲದ ನಾಡೆಳ್ಳಾ ಅವರು 2014ರಿಂದ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. 2021ರಲ್ಲಿ ಅವರನ್ನು ಕಂಪನಿಯ ಚೇರ್ಮನ್ನರಾಗಿ ಕೂಡ ನೇಮಕ ಮಾಡಲಾಗಿದೆ. ಭಾರತ ಕೊಡ ಮಾಡುವ ಪದ್ಮ ಪ್ರಶಸ್ತಿಗಳ ಪೈಕಿ ಪದ್ಮಭೂಷಣವು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.