Tuesday, 17th December 2024

Saydnaya Prison: ಅತ್ಯಾಚಾರ, ಎಲೆಕ್ಟ್ರಿಕ್‌ ಶಾಕ್- ಇದು ಜೈಲಲ್ಲ..ಮಾನವ ಕಸಾಯಿಖಾನೆ! ಸೈದ್ನಾಯಾ ಸೆರೆಮನೆಯಿಂದ ನೂರಾರು ಕೈದಿಗಳು ರಿಲೀಸ್‌

ಡಮಾಸ್ಕಸ್:‌ ಇಸ್ಲಾಮಿ ಒಕ್ಕೂಟದ ಹಯಾತ್ ತಹ್ರೀರ್ ಅಲ್-ಶಾಮ್ (Hayat Tahrir al-Sham) ನೇತೃತ್ವದ ಬಂಡುಕೋರ ಪಡೆಗಳು (Rebel Forces) ಭಾನುವಾರ(ಡಿ.8) ಸಿರಿಯಾ (Syria) ದೇಶದ ರಾಜಧಾನಿ ಡಮಾಸ್ಕಸ್ (Damascus) ಅನ್ನು ವಶಪಡಿಸಿಕೊಂಡ ನಂತರ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಅವರ ಕುಟುಂಬಸ್ಥರು ಸಿರಿಯಾ ಬಿಟ್ಟು ಪರಾರಿಯಾಗಿದ್ದಾರೆ ತಿಳಿದು ಬಂದಿದೆ. ಈ ಮಧ್ಯೆ ನರಕ ಸದೃಶ್ಯದಂತಿದ್ದ ಮತ್ತು ಮಾನವ ಕಸಾಯಿಖಾನೆ ಎಂದು ಕುಖ್ಯಾತಿ ಪಡೆದಿದ್ದ ಸೈದ್ನಾಯಾ ಜೈಲಿನಿಂದ(Saydnaya Prison) ಸಾವಿರಾರು ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.

ಅಸ್ಸಾದ್‌ ಆಡಳಿತ ಪತನವಾಗುತ್ತಿದ್ದಂತೆ ಬಂಡುಕೋರರು ಕುಖ್ಯಾತ ಸೈದ್ನಾಯಾ ಮಿಲಿಟರಿ ಸೆರೆಮನೆಗೆ ಪ್ರವೇಶಿಸಿದ್ದು, ಅಲ್ಲಿನ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. “ನಮ್ಮ ಕೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಅವರನ್ನು ಸರಪಳಿಗಳಿಂದ ಬಂಧ ಮುಕ್ತವಾಗಿಸಿದ್ದೇವೆ. ಸೈದ್ನಾಯಾ ಜೈಲಿನಲ್ಲಿ ಅನ್ಯಾಯದ ಯುಗದ ಅಂತ್ಯವನ್ನು ಘೋಷಿಸುವ ಸುದ್ದಿಯನ್ನು ನಾವು ಸಿರಿಯನ್ ಜನರೊಂದಿಗೆ ಆಚರಿಸುತ್ತೇವೆ” ಎಂದು ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ, ಅಲೆಪ್ಪೊ, ಹೋಮ್ಸ್, ಹಮಾ ಮತ್ತು ಡಮಾಸ್ಕಸ್ ಸೇರಿದಂತೆ ನಗರಗಳಲ್ಲಿ ದಂಗೆಕೋರರು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಸೈದ್ನಾಯ್‌ ಸೆರೆಮನೆಯ ಕ್ರೂರತೆ

ಬಂಡುಕೋರರು ಸೈದ್ನಾಯಾ ಜೈಲಿನೊಳಗಿನ ಭಯಾನಕತೆಯನ್ನು ಇದೀಗ ಅನಾವರಣಗೊಳಿಸಿದ್ದಾರೆ. ಇದನ್ನು ಸಾಮಾನ್ಯವಾಗಿ ‘ಮಾನವ ಕಸಾಯಿಖಾನೆ’ ಎಂದು ಕರೆಯಲಾಗುತ್ತದೆ. ಬಂಧಿತರನ್ನು ಕ್ರೂರವಾಗಿ ನಡೆಸಿಕೊಳ್ಳುವುದಕ್ಕೆ ಈ ಕಾರಾಗೃಹ ಕುಖ್ಯಾತವಾಗಿತ್ತು. ಬಶರ್ ಅಲ್-ಅಸ್ಸಾದ್ ಆಳ್ವಿಕೆಯಲ್ಲಿ ಬಳಲುತ್ತಿದ್ದ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಈ ಜೈಲಿನಲ್ಲಿದ್ದರು. ಬಂಡುಕೋರರು ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ಕೂಡಲೇ, ಜೈಲಿನ ಕೋಣೆಗಳ ಬಾಗಿಲುಗಳನ್ನು ತೆರೆದಿದ್ದಾರೆ. ಬದುಕುಳಿದವರು ಅಲ್ಲಿನ ದೌರ್ಜನ್ಯಗಳನ್ನು ವಿವರಿಸಿದ್ದಾರೆ.

  • ಡಮಾಸ್ಕಸ್ ಬಳಿ ಇರುವ ಸೈದ್ನಾಯಾ ಜೈಲು ರಾಜಕೀಯ ಕೈದಿಗಳ ಬಂಧನ ಕೇಂದ್ರವಾಗಿತ್ತು.
  • ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇದನ್ನು 2017 ರಲ್ಲಿ “ಮಾನವ ಕಸಾಯಿಖಾನೆ” ಎಂದು ಕರೆದಿತ್ತು. ಅಲ್ಲಿ ಸಾಮೂಹಿಕ ಮರಣದಂಡನೆ ಮತ್ತು ಚಿತ್ರಹಿಂಸೆಗಳನ್ನು ನೀಡಲಾಗುತ್ತಿತ್ತು.
  • 2011 ಮತ್ತು 2018 ರ ನಡುವೆ, 30,000 ಕ್ಕೂ ಹೆಚ್ಚು ಬಂಧಿತರು ಚಿತ್ರಹಿಂಸೆ, ಹಸಿವು ಅಥವಾ ಮರಣದಂಡನೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
  • ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿದ್ದವು. ಎಳೆ ಮಕ್ಕಳಿಗೆ ವಿದ್ಯುತ್‌ ಶಾಕ್‌ನಂಥ ಭಯಾನಕ ಶಿಕ್ಷೆಗಳನ್ನು ನೀಡಲಾಗುತ್ತಿತ್ತು.
  • ಗಲ್ಲಿಗೇರಿಸಿದ ಕೈದಿಗಳ ಶವಗಳನ್ನು ವಿಲೇವಾರಿ ಮಾಡಲು 2017 ರಲ್ಲಿ ಸ್ಮಶಾನವನ್ನು ನಿರ್ಮಿಸಲಾಗಿದೆ.
  • ಕೈದಿಗಳಲ್ಲಿ ಎಲ್ಲಾ ವಯೋಮಾನದ ವ್ಯಕ್ತಿಗಳಿದ್ದಾರೆ. ಅವರ ತಾಯಂದಿರೊಂದಿಗೆ ಬಂಧಿಸಲ್ಪಟ್ಟಿರುವ ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ವಯೋವೃದ್ಧರನ್ನೂ ಬಂಧಿಸಲಾಗಿತ್ತು.
  • ಸೆರೆಮನೆಯಲ್ಲಿದ್ದ ಬಂಧಿತರನ್ನು ಚಾವಟಿಯಿಂದ ಹೊಡೆದು, ಒದೆಯಲಾಗುತ್ತಿತ್ತು. ವಿದ್ಯುತ್‌ ಶಾಕ್, ಸುಡುವುದು ಮತ್ತು ಇತರ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಪಡಿಸಲಾಗುತ್ತಿತ್ತು.
  • ಸತ್ತ ಬಂಧಿತರ ಶವಗಳನ್ನು ಜೊತೆಗೆ ಸೆಲ್‌ಗಳಲ್ಲಿ ಇರಿಸಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿರುವುದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ:Physical Abuse: ಮಂಗಳೂರು ರೈಲಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಬುತಾಹಿರ್‌ಗೆ 20 ವರ್ಷ ಜೈಲು