Thursday, 19th September 2024

ವಾಹನಗಳ ಸರಣಿ ಅಪಘಾತ: ಐದು ಮಂದಿ ಸಾವು

ಟೆಕ್ಸಾಸ್​: 100 ವಾಹನಗಳ ನಡುವಿನ ಅತಿದೊಡ್ಡ ಸರಣಿ ಅಪಘಾತದಿಂದಾಗಿ ಐವರು ದಾರುಣವಾಗಿ ಮೃತಪಟ್ಟಿದ್ದಾರೆ.

ಯುನೈಟೆಡ್​ ಸ್ಟೇಟ್ಸ್​, ಟೆಕ್ಸಾಸ್​ನ ದಲ್ಲಾಸ್​ನಿಂದ 50 ಕಿ.ಮೀ ದೂರುದಲ್ಲಿರುವ ಫೋರ್ಟ್​ ವರ್ತ್​ನಲ್ಲಿ ಘಟನೆ ಸಂಭವಿಸಿದೆ. ಸಣ್ಣ ಕಾರುಗಳು, ಎಸ್​ಯುವಿ ಮತ್ತು 18 ಚಕ್ರವುಳ್ಳ ಟ್ರಕ್ಸ್​ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.

30 ಮಂದಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.  ಘಟನಾ ಸ್ಥಳದಲ್ಲಿ ಸುಮಾರು 24 ಅಗ್ನಿಶಾಮಕ ಘಟಕಗಳು ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.