Sunday, 15th December 2024

ಪ್ರಧಾನಿ ಅಭ್ಯರ್ಥಿಯಾಗಿ ಶೆಹಬಾಜ್ ಷರೀಫ್ ನಾಮನಿರ್ದೇಶನ

ಇಸ್ಲಾಮಾಬಾದ್: ಅವಿಶ್ವಾಸ ಗೊತ್ತುವಳಿಯಲ್ಲಿ ಸೋತ ನಂತರ ಇಮ್ರಾನ್ ಖಾನ್ ಅವರ ಸ್ಥಾನಕ್ಕೆ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ನ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ನಾಮ ನಿರ್ದೇಶನ ಮಾಡಲಾ ಗಿದೆ.

ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಶರೀಫ್ ಪ್ರಧಾನಿಯಾಗಿ ಘೋಷಿಸಲು ಎನ್‌ಎ ಅಧಿವೇಶನಕ್ಕೂ ಮುನ್ನ ಜಂಟಿ ಪ್ರತಿಪಕ್ಷದ ಅಭ್ಯರ್ಥಿಯನ್ನು ಘೋಷಿಸಿದರು.

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್‌ನ ಶೆಹಬಾಜ್ ಷರೀಫ್ ಅವರನ್ನು ವಿರೋಧ ಪಕ್ಷಗಳು ಏ.11ರಂದು ನಡೆಯಲಿರುವ ಪ್ರಧಾನಿ ಹುದ್ದೆಗೆ ತಮ್ಮ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿವೆ.