Friday, 20th September 2024

ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿಲ್ಪಾ ಹೆಗ್ಡೆ ಆಯ್ಕೆ

ಮೆಲ್ಬರ್ನ್: ಜಿಲ್ಲೆಯ ಶಿಲ್ಪಾ ಹೆಗ್ಡೆ (44) ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಉಡುಪಿಯ ಪೆರ್ಡೂರು ಮೂಲದ ಶಿಲ್ಪಾ, ಮೋಹನ್ ದಾಸ್ ಹೆಗ್ಡೆ ಹಾಗೂ ಶಶಿಕಲಾ ದಂಪತಿ ಪುತ್ರಿ. ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡಿದ್ದು, ಆಸ್ಟ್ರೇಲಿಯಾದಲ್ಲಿ ಇಪ್ಪತ್ತು ವರ್ಷದಿಂದ ನೆಲೆಸಿದ್ದಾರೆ. ಸದ್ಯ ಡಿಡಬ್ಲುಎಸ್ ಗ್ಲೋಬಲ್ ಕಂಪನಿ ಐಟಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಲ್ಪಾ ಪತಿ ದಯಾನಂದ್ ಶೆಟ್ಟಿ ಕೂಡ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿದ್ದಾರೆ.

2013ರಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಶಿಲ್ಪಾ ಹೆಗ್ಡೆ ಮೆಲ್ಬರ್ನ್‌ನ ವಿಲ್ಸ್‌ನಿಂದ ಚುನಾವಣೆ ಸ್ಪರ್ಧಿಸಿದ್ದರು. ಇದೀಗ ಅವರನ್ನು ಲಿಬರಲ್ ಪಕ್ಷದ ಉನ್ನತ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿ ದಂತೆ ಪಕ್ಷದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿ ಇದಾಗಿದ್ದು, ಈ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎಂದು ಶಿಲ್ಪಾ ಕರೆಸಿಕೊಂಡಿದ್ದಾರೆ.