Sunday, 15th December 2024

ಮೇರಿಲ್ಯಾಂಡ್ ಉತ್ಪಾದನಾ ಘಟಕದಲ್ಲಿ ಏಕಾಏಕಿ ಗುಂಡಿನ ದಾಳಿ

ವಾಷಿಂಗ್ಟನ್:ಅಮೆರಿಕಾದಲ್ಲಿ ಗುಂಡಿನ ದಾಳಿಯ ಸಾಮೂಹಿಕ ಹತ್ಯೆ ಮುಂದುವರಿದಿದ್ದು, ಗುರುವಾರ ಉತ್ತರ ಮೇರಿಲ್ಯಾಂಡ್ ನ ಉತ್ಪಾದನಾ ಘಟಕವೊಂದರಲ್ಲಿ ಬಂದೂಕುಧಾರಿ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

ಗುಂಡಿನ ದಾಳಿಯಲ್ಲಿ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದ, ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ಹೇಳಿದೆ. ಭದ್ರತಾ ಸಿಬ್ಬಂದಿಯ ಪ್ರತಿದಾಳಿಯಲ್ಲಿ ಗಾಯಗೊಂಡಿರುವ ದುಷ್ಕರ್ಮಿಯನ್ನು ವಶಕ್ಕೆ ಪಡೆಯಲಾಗಿದೆ.

ಪ್ರತಿದಾಳಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ದುಷ್ಕರ್ಮಿ ಗಾಯಗೊಂಡಿದ್ದು ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಾಷಿಂಗ್ಟನ್ ಕೌಂಟಿಯ ಷರೀಫ್ ತಿಳಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಎಷ್ಟು ಮಂದಿ ಉದ್ಯೋಗಿಗಳು ಹಾಜರಿದ್ದರು ಎಂಬುದು ಸ್ಪಷ್ಟವಾಗಿಲ್ಲ ಎಂದು ಕೊಲಂಬಿಯಾ ವಕ್ತಾರರೊಬ್ಬರು ತಿಳಿಸಿದ್ದಾರೆ.