Saturday, 14th December 2024

ಪಾರ್ಟಿಗೆ ನುಗ್ಗಿ ದುಷ್ಕರ್ಮಿಗಳಿಂದ ಏಕಾಏಕಿ ಗುಂಡಿನ ದಾಳಿ

ತ್ತರ ಮೆಕ್ಸಿಕೋ: ಪಾರ್ಟಿಗೆ ನುಗ್ಗಿ ಬಂದ ಮೂವರು ದುಷ್ಕರ್ಮಿಗಳು, ಗನ್​ನಿಂದ ಪಾರ್ಟಿಗೆ ಬಂದಿದ್ದ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬಂದೂಕು ಹಿಡಿದ ಮೂವರು ಕಿಡಿಗೇಡಿಗಳು ಪಾರ್ಟಿಯೊಂದಕ್ಕೆ ನುಗ್ಗಿ ಪಾರ್ಟಿಗೆ ಬಂದವರ ಮೇಲೆ ಗುಂಡು ಹಾರಿಸಿ, ಆರು ಜನರನ್ನು ಬಲಿ ಪಡೆದಿ ದ್ದಾರೆ. ಮೃತಪಟ್ಟವರಲ್ಲಿ ಇಬ್ಬರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಗಾಯಗೊಂಡವರಲ್ಲಿ ಐವರು ಮಕ್ಕಳು ಎಂದು ಹೇಳಲಾಗಿದೆ.

ಗಡಿ ರಾಜ್ಯ ಸೊನೊರಾದ ಸಿಯುಡಾಡ್ ಒಬ್ರೆಗಾನ್ ನಗರದಲ್ಲಿ ಸಂಭವಿಸಿದ ದಾಳಿಯಲ್ಲಿ ಅನೇಕರು ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ.

ಪೊಲೀಸರ ಪ್ರಕಾರ, ಗುಂಡಿನ ದಾಳಿ ಘಟನೆಯು ನರಹತ್ಯೆ ಮತ್ತು ಹಲವು ಆರೋಪಗಳನ್ನು ಹೊತ್ತಿದ್ದ ಶಂಕಿತ ಕಾರ್ಟೆಲ್ ಸಹಚರರ ಮೇಲೆ ನಡೆದ ದಾಳಿಯಾಗಿದೆ.