Sunday, 13th October 2024

ಚೀನಾದ ಸ್ಥಾನಿಕ ಸಂಯೋಜಕರಾಗಿ ಭಾರತದ ಸಿದ್ಧಾರ್ಥ್‌ ಚಟರ್ಜಿ ನೇಮಕ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಹಿರಿಯ ಅಧಿಕಾರಿ ಭಾರತದ ಸಿದ್ಧಾರ್ಥ್‌ ಚಟರ್ಜಿ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ನೇಮಿಸಿದ್ದಾರೆ.

ಸ್ಥಾನಿಕ ಸಂಯೋಜಕರು, ದೇಶದ ಅಭಿವೃದ್ಧಿ ಕಾರ್ಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕರ ನೇತೃತ್ವದ ತಂಡವು ದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಮೂಲಕ ಕೋವಿಡ್‌-19 ಪಿಡುಗಿನ ವಿರುದ್ಧ ಹೋರಾಡಲು ಸಹಕರಿಸುತ್ತದೆ.

ಗುಟೆರೆಸ್‌ ಅವರು ಸರ್ಕಾರದ ಅನುಮತಿಯೊಂದಿಗೆ ಸಿದ್ಧಾರ್ಥ್‌ ಚಟರ್ಜಿ ಅವರನ್ನು ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ನೇಮಿಸಿದ್ದಾರೆ. ಜನವರಿಯ ಎರಡು ಅಥವಾ ಮೂರನೇ ವಾರದಲ್ಲಿ ಸಿದ್ಧಾರ್ಥ್‌ ಅವರು ಅಧಿಕಾರ ಸ್ವೀಕರಿಸ ಲಿದ್ದಾರೆ.

ಅಂತರಾಷ್ಟ್ರೀಯ ಸಹಕಾರ, ಸುಸ್ಥಿರ ಅಭಿವೃದ್ಧಿ, ಮಾನವೀಯ ಸಮನ್ವಯ, ಶಾಂತಿ ಮತ್ತು ಸುರಕ್ಷತೆ ಕ್ಷೇತ್ರಗಳಲ್ಲಿ ಚಟರ್ಜಿ ಅವರಿಗೆ 25 ವರ್ಷಗಳ ಅನುಭವವಿದೆ.