ಸಿಯೋಲ್: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್ ಅವರು ಮಂಗಳವಾರ ಬುಸಾನ್‌ನಲ್ಲಿ ಮಾತನಾಡುವ ವೇಳೆ ಅಪರಿಚಿತ ವ್ಯಕ್ತಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.
ಪತ್ರಕರ್ತರ ಗುಂಪಿನ ಮಧ್ಯೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಜೇ-ಮ್ಯುಂಗ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿದೆ. ಜೇ-ಮ್ಯುಂಗ್ ಅವರನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ.
59 ವರ್ಷದ ಲೀ ಜೇ-ಮ್ಯುಂಗ್ ಗಾಯಗೊಂಡ ವೇಳೆ ಅಲ್ಲಿದ್ದ ಜನರು ತಕ್ಷಣ ಬಟ್ಟೆಯಿಂದ ಗಾಯಗೊಂಡ ಭಾಗಕ್ಕೆ ರಕ್ತ ಸೋರಿಕೆಯಾಗದಂತೆ ಚಿಕಿತ್ಸೆ ನೀಡಿದ್ದಾರೆ.
ಜೇ-ಮ್ಯುಂಗ್ ತಮ್ಮ ಕಾರಿನ ಕಡೆ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಆಟೋಗ್ರಾಫ್ ಕೇಳುವ ನೆಪದೊಂದಿಗೆ ಬಂದು ಚಾಕುವಿನಿಂದ ಇರಿದಿ ದ್ದಾನೆ ಎಂದು ಸ್ಥಳೀಯರೊಬ್ಬರು ವಿವರ ನೀಡಿದ್ದಾರೆ.
ಯಾವುದೇ ಸಂದರ್ಭದಲ್ಲೂ ನಮ್ಮ ಸಮಾಜವು ಈ ರೀತಿಯ ಹಿಂಸಾಚಾರವನ್ನು ಸಹಿಸಬಾರದು ಎಂದು ಸಿಯುಂಗ್ ಒತ್ತಾಯಿಸಿದರು.