ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಉಪಾ ಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತಿತರ ಕ್ವಾಡ್ ನಾಯಕರಿಗೆ ವಿಶಿಷ್ಠ ಉಡುಗೊರೆ ನೀಡಿದ್ದಾರೆ.
ಹ್ಯಾರಿಸ್ ಅವರ ತಾತಾ ಪಿವಿ ಗೋಪಾಲನ್ ಅವರಿಗೆ ಸಂಬಂಧಿಸಿದ ಹಳೆಯ ಅಧಿಸೂಚನೆಗಳ ಪ್ರತಿಯನ್ನು ಮರದ ಕರಕುಶಲತೆಯ ಫ್ರೇಮ್ ನಲ್ಲಿ ಉಪಾಧ್ಯಕ್ಷ ರಿಗೆ ನೀಡಿದರು. ಕಮಲಾ ಹ್ಯಾರಿಸ್ ಅವರ ಅಜ್ಜ ಪಿವಿ ಗೋಪಾಲನ್ ಹಿಂದೆ ಭಾರತದಲ್ಲಿ ವಿವಿಧ ಇಲಾಖೆಯಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದರು.
ಗುಲಾಬಿ ಮೀನಾಕ್ಷಿ ಚೆಸ್ ಸೆಟ್ ನ್ನು ಪಿವಿ ಹ್ಯಾರಿಸ್ ಅವರಿಗೆ ಪ್ರಧಾನಿ ಮೋದಿ ಗಿಫ್ಟ್ ನೀಡಿದರು. ಗುಲಾಬಿ ಮೀನಾಕ್ಷಿ ಚೆಸ್ ಕಾಶಿಗೆ ಸೇರಿದ ಕರಕುಶಲ ವಸ್ತುವಾಗಿದೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ಸಿಲ್ವರ್ ಗುಲಾಬಿ ಮೀನಾಕ್ಷಿ ಹಡಗು ಹಾಗೂ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರಿಗೆ ಸ್ಯಾಂಡಲ್ ವುಡ್ ಬುದ್ಧನ ವಿಗ್ರಹ ವನ್ನು ಗಿಫ್ಟ್ ಆಗಿ ಮೋದಿ ನೀಡಿದರು.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ಅವರು ಕಮಲಾ ಹ್ಯಾರಿಸ್ ಗೆ ಗುಲಾಬಿ ಮೀನಾಕಾರಿ ಚೆಸ್ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಲಾಕೃತಿ ಕಾಶಿ ಜತೆ ನಿಕಟ ಸಂಬಂಧ ಹೊಂದಿದ್ದು, ಕಾಶಿ ಜಗತ್ತಿನಲ್ಲಿಯೇ ಅತೀ ಪುರಾತನ ನಗರಗಳಲ್ಲಿ ಒಂದಾಗಿದೆ.
ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಕೋವಿಡ್ 19 ನಿಯಂತ್ರಣ ಸೇರಿದಂತೆ ಜಾಗತಿಕ ವಿಷಯಗಳ ವಿಚಾರದಲ್ಲಿ ಭಾರತ, ಅಮೆರಿಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂಬುದಾಗಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.