Friday, 20th September 2024

ಧರ್ಮನಿಂದನೆ ಆರೋಪ: ಗಾರ್ಮೆಂಟ್ ಫ್ಯಾಕ್ಟರಿ ಮ್ಯಾನೇಜರ್ ದಹನ

Pakistan

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದನೆ ಆರೋಪ ಎದುರಿಸಿದ ಗಾರ್ಮೆಂಟ್ ಫ್ಯಾಕ್ಟರಿಯ ಶ್ರೀಲಂಕಾ ಮೂಲದ ಮ್ಯಾನೇಜರ್ ಮೇಲೆ ಗುಂಪೊಂದು ದಾಳಿ ನಡೆಸಿ, ಸಜೀವ ದಹನ ಮಾಡಿದ ಅಮಾನವೀಯ ಘಟನೆ ನಡೆದಿದೆ.

ಲಾಹೋರ್ ನಿಂದ 100 ಕಿಲೋ ಮೀಟರ್ ದೂರದ ಸಿಯಾಲ್ ಕೋಟ್ ಜಿಲ್ಲೆ ಯಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಿಯಾಂತಾ ಕುಮಾರ (40) ರನ್ನು ಸಜೀವ ದಹನ ಮಾಡಲಾ ಗಿದೆ.

ಕುಮಾರ ಅವರು ತೆಹ್ರೀಕ್ ಇ ಲಬ್ಲೈಕ್ ಪಾಕಿಸ್ತಾನ್ ಸಂಘಟನೆಯ ಕರಪತ್ರ ಹರಿದು ಕಸದ ಬುಟ್ಟಿಗೆ ಹಾಕಿದ್ದರು. ಆ ಕರಪತ್ರದಲ್ಲಿ ಕುರಾನ್ ನ ಸಾಲುಗಳು ಇದ್ದ ಕಾರಣ, ಪ್ರಿಯಾಂತಾ ಧರ್ಮನಿಂದನೆ ಮಾಡಿದ್ದಾರೆಂದು ಆರೋಪಿಸಿ ಅವರನ್ನು ಹತ್ಯೆಗೈದು ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಧರ್ಮನಿಂದನೆ ಮಾಡಿ ರುವ ಆರೋಪ ಕೇಳಿ ಬಂದ ನಂತರ ಫ್ಯಾಕ್ಟರಿಯ ಹೊರಗೆ ನೂರಾರು ಮಂದಿ ಗುಂಪುಗೂಡಿದ್ದರು. ಆಕ್ರೋಶಗೊಂಡ ಗುಂಪು ಫ್ಯಾಕ್ಟರಿಯೊಳಗೆ ನುಗ್ಗಿ ಕುಮಾರ ಅವರನ್ನು ಹೊರಗೆ ಎಳೆದು ತಂದು ಥಳಿಸಿ, ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿದೆ.

ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಫೂಟೇಜ್ ಪರಿಶೀಲಿಸಿ ಈಗಾಗಲೇ ಶಂಕಿತ ನೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೊಂದು ತಲೆತಗ್ಗಿಸುವ ಘಟನೆಯಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.