Sunday, 15th December 2024

ಶ್ರೀಲಂಕಾದ ಆರ್ಥಿಕತೆಗೆ ಪುಷ್ಟಿಗೆ 25 ಸಾವಿರ ಕೋಟಿ ರುಪಾಯಿ ಅನುಮೋದನೆ

ಕೊಲಂಬೋ: ಹಣಕಾಸು ಮತ್ತು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಐಎಂಎಫ್ ಮತ್ತೊಮ್ಮೆ ನೆರವಿನ ಹಸ್ತ ಚಾಚಿದೆ.

ಶ್ರೀಲಂಕಾಗೆ 3 ಬಿಲಿಯನ್ ಡಾಲರ್ ( ಸುಮಾರು 25 ಸಾವಿರ ಕೋಟಿ ರುಪಾಯಿ ) ಸಹಾಯ ದನ ಬಿಡುಗಡೆ ಮಾಡಲು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯಕಾರಿ ಮಂಡಳಿ ಅನುಮೋ ದನೆ ನೀಡಿದೆ. ಶ್ರೀಲಂಕಾದ ಆರ್ಥಿಕತೆಗೆ ಪುಷ್ಟಿ ಕೊಡಲು ಈ ಹಣವನ್ನು ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಐಎಂಎಫ್ ಬಿಡುಗಡೆ ಮಾಡಲಿದೆ.

ಶ್ರೀಲಂಕಾ ಕೆಲವಾರು ವರ್ಷಗಳಿಂದ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದೆ. ವಿಪರೀತ ಹಣದುಬ್ಬರ, ದೊಡ್ಡ ಪ್ರಮಾಣದಲ್ಲಿ ಸಾಲ, ಫಾರೆಕ್ಸ್ ರಿಸರ್ವ್ ನಿಧಿಯಲ್ಲಿ ಭಾರೀ ಕುಸಿತಗೊಂಡು ಶ್ರೀಲಂಕಾ ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಭಾರೀ ಸಮಸ್ಯೆಗೆ ಸಿಲುಕಿದೆ. ಲಂಕಾದ ಆಡಳಿತ ಸಂಸ್ಥೆಗಳಲ್ಲಿ ಬಹಳ ಹೆಚ್ಚು ಸುಧಾರಣೆ ಆಗಬೇಕಿದೆ ಎಂದು ಐಎಂಎಫ್​ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಾಲಿನಾ ಹೇಳಿದ್ದಾರೆ.

ಐಎಂಎಫ್​ನಿಂದ ಈಗ 3 ಬಿಲಿಯನ್ ಡಾಲರ್ ನೆರವಿನ ಯೋಜನೆ ಬಿಡುಗಡೆ ಆಗಿರುವುದು ಶ್ರೀಲಂಕಾಗೆ ಇನ್ನಷ್ಟು ಅಂತಾರಾಷ್ಟ್ರೀಯ ನೆರವು ಸಿಗಲು ಕಾರಣವಾಗಲಿದೆ.

ಇದು ಶ್ರೀಲಂಕಾಗೆ ಐಎಂಎಫ್ ನೀಡಿದ 17ನೇ ಸಾಲ ಯೋಜನೆಯಾಗಿದೆ.