ಡಾಕಾ: ಬಾಂಗ್ಲಾದೇಶದಲ್ಲಿ ದಾಳಿಕೋರರ ಗುಂಪು ಇಸ್ಕಾನ್ ಮಂದಿರದಲ್ಲಿ ವಿಧ್ವಂಸಕ ಕೃತ್ಯ ಎಸಗಿದೆ.
200 ಜನರ ಗುಂಪು ಇಸ್ಕಾನ್ ದೇಗುಲಕ್ಕೆ ನುಗ್ಗಿ, ಓರ್ವ ಸಿಬ್ಬಂದಿಯನ್ನು ಮನಸೋಇಚ್ಛೆ ಥಳಿಸಿ ಕೊಲ್ಲ ಲಾಗಿದೆ. ನಂತರ ಶವವನ್ನು ಮಂದಿರದ ವ್ಯಾಪ್ತಿಯಲ್ಲಿನ ಕೆರೆಯಲ್ಲಿ ಎಸೆಯಲಾಗಿದೆ ಎಂದು ಇಸ್ಕಾನ್ ದೇವಸ್ಥಾನದ ಸಮಿತಿ ಮಾಹಿತಿ ನೀಡಿದೆ. ದಾಳಿಯಲ್ಲಿ ಸುಮಾರು 17 ಜನರು ಗಾಯ ಗೊಂಡಿರುವ ಬಗ್ಗೆ ವರದಿಯಾಗಿದೆ.
ದಾಳಿ ಮುಂದುವರಿದೂ ಮುಶಿಗಂಜ್ ಇಲಾಖೆಯ ಕಾಳಿ ಮಂದಿರಕ್ಕೆ ನುಗ್ಗಿ ಆರು ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ದೇವಸ್ಥಾನಕ್ಕೆ ಯಾವುದೇ ಪೊಲೀಸ್ ಭದ್ರತೆ ಇರದ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ಯಾವುದೇ ಭಯವಿಲ್ಲದೇ ಆರು ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಹಿಂದೆ ಇಂತಹ ಘಟನೆಗಳು ಇಲ್ಲಿ ನಡೆದಿರಲಿಲ್ಲ ಎಂದು ದಾನಿಯಾಪಾರಾದ ಪ್ರಧಾನ ಕಾರ್ಯದರ್ಶಿ ಶುವ್ರತ್ ದೇವನಾಥ್ ವಾಸು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಬುಧವಾರದಿಂದ ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಚಾಂದಪುರ, ಚಿಟ್ಟಾಗಾಂವ್, ಗಾಜಿಪುರ, ಬಂದರ್ ಬನ್, ಚಪಾಯಿನವಾಬಗಂಜ್ ಮತ್ತು ಮೌಲ್ವಿಬಾಜಾರ್ ನಲ್ಲಿಯ ದುರ್ಗಾ ಪೂಜೆ ಮೇಲೆ ದಾಳಿ ನಡೆಸಲಾಗಿತ್ತು.