ಸುಡಾನ್: ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸ ಲಾಗಿದೆ.
ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಇಂಟರ್ನೆಟ್ ಹಾಗೂ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸುಡಾನ್ ಪ್ರಧಾನಿ ಅಬ್ದಲ್ಲಾ ಹಮ್ಡೋಕ್ ಸುಳಿವಿಲ್ಲ. ಈ ನಡುವೆ ದೇಶದ ನ್ಯೂಸ್ ಚಾನೆಲ್ ದೇಶಭಕ್ತಿಯ ಸಾಂಪ್ರದಾಯಿಕ ಸಂಗೀತ ಹಾಗೂ ನೈಲ್ ನದಿಯ ಸೀನ್ಗಳನ್ನು ಪ್ರಸಾರ ಮಾಡಿದೆ.
ದೇಶದ ಪ್ರಮುಖ ಪ್ರಜಾಪ್ರಭುತ್ವ ಗುಂಪು ಹಾಗೂ ಅತಿದೊಡ್ಡ ರಾಜಕೀಯ ಪಕ್ಷವು ಸ್ಪಷ್ಟವಾದ ಸೇನಾ ದಂಗೆಯನ್ನು ಎದುರಿಸಲು ಜನರಿಗೆ ಬೀದಿ ಗಿಳಿಯುವಂತೆ ಕರೆ ನೀಡಿದೆ. ಸಾವಿರಾರು ಜನರು ಖಾರ್ಟೂಮ್ ಹಾಗೂ ಓಮ್ದುರ್ಮಾನ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಜನರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಬಳಕೆ ಮಾಡಿದ್ದಾರೆ ಹಾಗೂ ಇದರಿಂದ ಕೋಪಗೊಂಡ ಪ್ರತಿಭಟನಾಕಾರು ಬೀದಿಗಳಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.