Monday, 16th September 2024

ನಿಯಂತ್ರಣದಲ್ಲಿಲ್ಲ ಡೆಲ್ಟಾ ರೂಪಾಂತರ ಪಿಡುಗು: ಸಿಡ್ನಿ ಇನ್ನಷ್ಟು ಬಿಗು

ಸಿಡ್ನಿ: ಆಸ್ಟ್ರೇಲಿಯಾದ ಅತಿದೊಡ್ಡ ನಗರ ಸಿಡ್ನಿಯಲ್ಲಿ ಕೊವಿಡ್-19 ಸೋಂಕಿನ ಡೆಲ್ಟಾ ರೂಪಾಂತ ರದ ಸಾಂಕ್ರಾಮಿಕ ಪಿಡುಗು ಹೆಚ್ಚುತ್ತಿರುವ ಹಿನ್ನೆಲೆ ಶುಕ್ರವಾರ ನಿರ್ಬಂಧಗಳನ್ನು ಮತ್ತಷ್ಟು ಕಠಿಣ ಗೊಳಿಸಲಾಗಿದೆ.

ಸಿಡ್ನಿಯಲ್ಲಿ ಕಳೆದ 24 ಗಂಟೆಗಳಲ್ಲಿ 44 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇಂಥ ಪರಿಸ್ಥಿತಿಯಲ್ಲಿ ಅನಗತ್ಯವಾಗಿ ಮನೆಗಳಿಂದ ಹೊರ ಬರಬೇಡಿ ಎಂದು ಸಿಡ್ನಿಯ 50 ಲಕ್ಷ ನಿವಾಸಿ ಗಳಲ್ಲಿ ಗ್ಲಾಡಿಸ್ ಬೆರೆಜಿಕ್ಲಿಯನ್ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಮೂರು ವಾರಗಳಿಂದ ಸಿಡ್ನಿಯಲ್ಲಿ ಲಾಕ್‌ಡೌನ್‌ನನ್ನು ಮುಂದುವರಿಸಿದ ಹೊರತಾಗಿಯೂ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆ ಏರುಮುಖವಾಗಿ ಸಾಗುತ್ತಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಜೂನ್ ಮಧ್ಯಭಾಗದಿಂದ ಈವರೆಗೂ ಸಿಡ್ನಿಯಲ್ಲಿ 439 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಜಾಗತಿಕ ಮಟ್ಟದಲ್ಲಿ ದೊಡ್ಡ ನಗರಗಳಲ್ಲಿ ವರದಿಯಾಗಿರುವ ಕೊರೊನಾವೈರಸ್ ಪ್ರಕರಣಗಳಿಗೆ ಹೋಲಿಸಿದರೆ ಇದು ತುಂಬ ಸಣ್ಣ ಸಂಖ್ಯೆ ಎನಿಸುತ್ತದೆ. ಆದರೆ ಆಸ್ಟ್ರೇಲಿಯಾದಲ್ಲಿ ಸೋಂಕು ಹರಡು ವಿಕೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ.9ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ.

ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೊಳಿಸ ಲಾಗಿದೆ. ಹೊಸ ನಿಯಮಗಳ ಪ್ರಕಾರ, ಬೆಳಗಿನ ವಾಕಿಂಗ್ ಸಂದರ್ಭದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಅನಗತ್ಯ ಪ್ರವಾಸವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *