Thursday, 12th December 2024

ಡೆಮಾಕ್ರಟಿಕ್‌ ಪಕ್ಷದ ನಬೀಲಾ ಸೈಯದ್‌’ಗೆ ಗೆಲುವು

ನ್ಯೂಯಾರ್ಕ್‌: ಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಭಾರತದ ಮೂಲ ದ, ನಬೀಲಾ ಸೈಯದ್‌ (23) ಇತಿಹಾಸ ಸೃಷ್ಟಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ನಬೀಲಾ ಸೈಯದ್‌ ಅವರು ಗೆಲುವು ಸಾಧಿಸಿದ್ದು, ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಅತಿ ಕಿರಿಯ ಸದಸ್ಯೆ ಎನಿಸಿದ್ದಾರೆ.

ರಿಪಬ್ಲಿಕ್‌ ಪಕ್ಷದ ಕ್ರಿಸ್‌ ಬೋಸ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಶೇ.52.3ರಷ್ಟು ಮತ ಪಡೆಯುವ ಮೂಲಕ ಮುನ್ನಡೆ ಸಾಧಿಸಿದ್ದಾರೆ. ನಬೀಲಾ ಸೈಯದ್‌ ಅವರೇ ಮಾಹಿತಿ ನೀಡಿದ್ದು, ‘ನನ್ನ ಹೆಸರು ನಬೀಲಾ ಸೈಯದ್.‌ ನಾನು 23 ವರ್ಷದ ಮುಸ್ಲಿಂ ಯುವತಿ. ನಾನು ಭಾರತ ಮೂಲದವಳಾಗಿದ್ದೇನೆ. ಸಬ್‌ಅರ್ಬನ್‌ ಜಿಲ್ಲೆಯಲ್ಲಿ ಗೆಲುವು ಸಾಧಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ನಾನು ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ. ನಾನು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನ ಕಿರಿಯ ಸದಸ್ಯೆ ಎನಿಸಲಿದ್ದೇನೆ. ಇಂತಹ ಗೆಲುವಿಗೆ ಕಾರಣವಾದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.