Friday, 22nd November 2024

ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿದ್ದವರ ಪೈಕಿ ಇಬ್ಬರ ಮೃತದೇಹ ಪತ್ತೆ

ಟೊರಾಂಟೋ: ಕೆನಡಾ ಗಡಿ ಮೂಲಕ ಕಾನೂನು ಬಾಹಿರವಾಗಿ ಅಮೆರಿಕಾಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿದ್ದವರ ಪೈಕಿ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ ಎಂಟಕ್ಕೇರಿದೆ.

ಮೃತರ ಪೈಕಿ ಭಾರತೀಯ ಕುಟುಂಬದ ಸದಸ್ಯರೂ ಸೇರಿದ್ದಾರೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳು ಆಕ್ವಾಸ್ನ್ ಬಳಿಯ ನದಿ ದಂಡೆಯ ಮರಳಿನಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಈ ಪೈಕಿ ಮತ್ತೊಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದಾನೆ ಎಂದು ವರದಿಯಾಗಿದೆ.

ಮೃತರು ಭಾರತ ಹಾಗೂ ರೊಮಾನಿಯಾ ಮೂಲದ ಎರಡು ಕುಟುಂಬಗಳಿಗೆ ಸೇರಿದವರು ಎಂದು ನಂಬಲಾಗಿದ್ದು, ಕೆನಡಾ ಗಡಿ ಮೂಲಕ ಅಮೆರಿಕಾ ಪ್ರವೇಶಿಸಲು ಪ್ರಯತ್ನಿಸುವಾಗ ಮೃತಪಟ್ಟಿದ್ದಾರೆ.