Thursday, 19th September 2024

ಅಧ್ಯಕ್ಷೀಯ ಚುನಾವಣೆ: ಮುಂಚಿತ ಮತ ಚಲಾಯಿಸಿದ ಟ್ರಂಪ್

ವೆಸ್ಟ್ ಪಾಮ್ ಬೀಚ್: ಮತ್ತೊಂದು ಬಿರುಸಿನ ಪ್ರಚಾರಕ್ಕೆ ಸಜ್ಜಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚಿತ ಮತ ಚಲಾಯಿಸಿದರು.

ಫ್ಲೋರಿಡಾದ ಮತದಾನ ಕೇಂದ್ರದಲ್ಲಿ ಟ್ರಂಪ್ ತಮ್ಮ ಹಕ್ಕು ಚಲಾಯಿಸಿದರು. “ಈಗಷ್ಟೇ ಮತ ಚಲಾಯಿಸಿದೆ. ಇದೊಂದು ಶ್ರೇಷ್ಟ ಗೌರವ” ಎಂದು ಟ್ರಂಪ್ ಟ್ವೀಟ್ ಮಾಡಿದರು.

“ನಾನು ಟ್ರಂಪ್ ಹೆಸರಿನ ವ್ಯಕ್ತಿಗೆ ಮತ ಚಲಾಯಿಸಿದೆ” ಎಂದು ನಸುನಗುತ್ತಾ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.