Saturday, 23rd November 2024

ಟ್ರಂಪ್ ರಂಪ: ಜೋ ಬೈಡನ್ ಅಧಿಕಾರ ಗ್ರಹಣಕ್ಕೆ ಗ್ರಹಣ

ಬೆಂಕಿ ಬಸಣ್ಣ

ವಿಶ್ವವಾಣಿ ಡಿಜಿಟಲ್: ಅಮೆರಿಕದಿಂದ ಪ್ರತ್ಯಕ್ಷ ವರದಿ

ಅಮೆರಿಕದ ಚುನಾವಣೆ ನವೆಂಬರ್ 3ರಂದು ನಡೆದು ಈಗಾಗಲೇ ಮೂರು ವಾರಗಳು ಕಳೆದರೂ ಡೊನಾಲ್ಡ್ ಟ್ರಂಪ್ ತನ್ನ ಸೋಲ ನ್ನು ಒಪ್ಪಿಕೊಳ್ಳಲು ತಯಾರಿಲ್ಲ.

ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆಯೆಂದು ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹೊಸ ಅಧ್ಯಕ್ಷ ಜೋ ಬೈಡನ್‌ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಟ್ರಂಪ್ ಸಹಕರಿಸುತ್ತಿಲ್ಲ. ಅಮೆರಿಕದ ಸಂವಿಧಾನದ ಪ್ರಕಾರ ಈಗಿರುವ ಅಧ್ಯಕ್ಷರ ಅಧಿಕಾರವು ಜನವರಿ 20ರಂದು ಮಧ್ಯಾಹ್ನ 12 ಗಂಟೆಗೆ ಮುಗಿಯಲಿದೆ. ಈವರೆಗೆ ನಡೆದುಕೊಂಡು ಬಂದ ಸಂಪ್ರದಾಯದ ಪ್ರಕಾರ
ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆಯುವ ಭರ್ಜರಿ ಸಮಾರಂಭದಲ್ಲಿ (ಪ್ರೆಸಿಡೆನ್ಸಿಯಲ್ ಇನಾಗುರೇಷನ್ ಡೇ) ಜನವರಿ 20ರಂದು ಮಧ್ಯಾಹ್ನ 12 ಗಂಟೆಗೆ ಹಳೇ ಅಧ್ಯಕ್ಷರಿಂದ ಹೊಸ ಅಧ್ಯಕ್ಷರಿಗೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಅಧಿಕಾರ
ಹಸ್ತಾಂತರ ಆಗಬೇಕು. ಈ ಸಮಾರಂಭದಲ್ಲಿ ಹೊಸ ಅಧ್ಯಕ್ಷರನ್ನು ಮುಂದಿನ ಸಾಲಿನಲ್ಲಿ ಮತ್ತು ಹಳೆಯ ಅಧ್ಯಕ್ಷರನ್ನು ಹಿಂದಿನ
ಸಾಲಿನಲ್ಲಿ ಕೂರಿಸುತ್ತಾರೆ.

ಹೊಸ ಅಧ್ಯಕ್ಷರು ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ನಂತರ ಅಧಿಕೃತವಾಗಿ ಶ್ವೇತಭವನ ಪ್ರವೇಶಿಸುತ್ತಾರೆ. ಹಾಗೆಯೇ ಹಳೆಯ ಅಧ್ಯಕ್ಷರಿಗೆ ಕೃತಜ್ಞತೆ ಹೇಳಿ ಗೌರವಯುತ ಬೀಳ್ಕೊಡುಗೆ ಮಾಡಲಾಗುತ್ತದೆ. ಇದು ಕಳೆದ ಇನ್ನೂರಕ್ಕೂ ಹೆಚ್ಚು ವರ್ಷ ಗಳಿಂದ ನಡೆದು ಬಂದ ಸಂಪ್ರದಾಯ. ಆದರೆ ಮುಂಬರುವ ಜನವರಿ 20ರಂದು ಹೊಸ ಅಧ್ಯಕ್ಷರ ಸ್ಥಾಪನೆಯ ಪ್ರೆಸಿಡೆನ್ಸಿಯಲ್ ಇನಾಗುರೇಷನ್ ಡೇ ನಡೆಯುವ ಯುರೋಪ್, ಇಲ್ಲವೋ ಎಂಬ ಬಗ್ಗೆ ಬಹುದೊಡ್ಡ ಅನುಮಾನ ಶುರುವಾಗಿದೆ.

ಬಹಳ ವಿಚಿತ್ರ ಮತ್ತು ತಮಾಷೆಯ ವಿಷಯವೆಂದರೆ, ಸೋತ ಅಧ್ಯಕ್ಷರು ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ
ಏನು ಮಾಡಬೇಕು ಎಂಬುದರ ಬಗ್ಗೆ ಅಮೆರಿಕದ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವೇ ಇಲ್ಲ. ಹಿಂದಿನಿಂದಲೂ ನಡೆದು ಕೊಂಡು ಬಂದ ಸಂಪ್ರದಾಯದ ಪ್ರಕಾರ ನವೆಂಬರ್ 3 ರಿಂದ ಜನವರಿ 20 ರವೆಗೆ ಹೊಸ ಅಧ್ಯಕ್ಷರ ತಂಡಕ್ಕೆ ಅಧಿಕಾರ ಹಸ್ತಾಂತರ ಸುಗಮವಾಗಿ ಸಾಗಬೇಕು. ಈ ಅವಧಿಯಲ್ಲಿ ಹೊಸ ಅಧ್ಯಕ್ಷರು ಎಲ್ಲ ಪ್ರಮುಖ ಖಾತೆಗಳಿಗೆ ತಮಗೆ ಬೇಕಾದ ಸೂಕ್ತ ಅಧಿಕಾರಿ ಗಳನ್ನು ಹುಡುಕಿ ಆಯ್ಕೆ ಮಾಡಿ ನೇಮಿಸುತ್ತಾರೆ. ಇದೇ ಕೆಲಸವನ್ನು ಜೋ ಬೈಡನ್ ಈಗ ಮಾಡುತ್ತಿದ್ದಾರೆ.

ಈ ಅವಧಿಯಲ್ಲಿ ಪ್ರತಿದಿನ ಇಂಟಲಿಜೆನ್ಸ್ ಏಜೆನ್ಸಿಯವರು ದೇಶದ ರಕ್ಷಣೆಯ ಮತ್ತು ವಿವಿಧ ಕ್ಷೇತ್ರಗಳ ಮುಖ್ಯ ವಿವರಗಳನ್ನು ವರದಿ ಮಾಡುವಾಗ ಈಗಿನ ಹಾಲಿ ಅಧ್ಯಕ್ಷರು, ನೂತನ ಅಧ್ಯಕ್ಷರನ್ನು ತಮ್ಮ ಸಮ್ಮುಖದಲ್ಲಿ ಇಟ್ಟುಕೊಳ್ಳಬೇಕು. ಆದರೆ ಟ್ರಂಪ್ ಯಾವುದೇ ರೀತಿಯ ಮಾಹಿತಿಗಳನ್ನು ಜೋ ಬೈಡೆನ್ ಜತೆ ಹಂಚಿಕೊಳ್ಳುತ್ತಿಲ್ಲ. ಅಮೆರಿಕದಲ್ಲಿ ಕರೋನಾದಿಂದ ಸಾವಿನ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಜೋ ಬೈಡನ್ ಅವರು ಕರೋನಾವನ್ನು ಸಮರ್ಪಕವಾಗಿ ನಿಯಂತ್ರಿಸಲು ತಮ್ಮ ಅಧಿಕಾರದ ಮೊದಲ
ದಿನದಿಂದಲೇ ಪೂರ್ಣ ಪ್ರಮಾಣದ ಕಾರ್ಯಕ್ರಮಗಳನ್ನು ಪ್ರಾರಂಭಗೊಳಿಸುವ ಯೋಚನೆಯಲ್ಲಿದ್ದರು. ಆದರೆ, ತಮ್ಮ ಪಾಲಿಸಿ ಗಳನ್ನು ರಚಿಸಲು, ಈಗಿನ ಟ್ರಂಪ್ ಟೀಮ್ ನೊಂದಿಗೆ ಕೆಲಸ ಮಾಡಲು ಸಾಧ್ಯವಾಗದೆ, ಸಂಪೂರ್ಣ ಅಸಹಾಯಕರಾಗಿ, ಅತೀವ
ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಟ್ರಂಪ್ ಅಸಹಕಾರದಿಂದ ಕರೋನಾ ಸೋಂಕಿತರ ಸಂಖ್ಯೆ ಇನ್ನೂ ಬಹಳಷ್ಟು ಹೆಚ್ಚ ಲಿದೆ ಎಂಬ ಆತಂಕ ಹೊರಹಾಕಿದ್ದಾರೆ.

ಇಲ್ಲಿನ ನಿಯಮಗಳ ಪ್ರಕಾರ, ಎಲ್ಲ ರಾಜ್ಯಗಳು, ಆಯಾ ರಾಜ್ಯಗಳ ಚುನಾವಣೆಯ ಫಲಿತಾಂಶಗಳನ್ನು ಡಿಸೆಂಬರ್ 8 ರೊಳಗೆ ಸರ್ಟಿಫೈ ಮಾಡಬೇಕು. ಆದರೆ ಚುನಾವಣೆ ಫಲಿತಾಂಶಗಳನ್ನು ಸರ್ಟಿಫೈ ಮಾಡಬೇಡಿ ಎಂದು ರಿಪಬ್ಲಿಕನ್ ಪಕ್ಷ ಅಧಿಕಾರದಲ್ಲಿ ರುವ ಸ್ವಿಂಗ್ ರಾಜ್ಯಗಳಿಗೆ ಟ್ರಂಪ್ ಒತ್ತಡ ಹೇರುತ್ತಿದ್ದಾರೆ.

ಮಿಷಿಗನ್ ರಾಜ್ಯದ ಇಬ್ಬರು ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳನ್ನು ಟ್ರಂಪ್ ತಮ್ಮ ಶ್ವೇತಭವನಕ್ಕೆ ಕರೆಸಿಕೊಂಡು ಈ ಬಗ್ಗೆ ಚರ್ಚಿ ಸಿದ್ದು, ಅವರ ಮೇಲೆ ಒತ್ತಡ ಹಾಕಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಎಲ್ಲ ಘಟನೆ ಗಳನ್ನು ವಿಶ್ಲೇಷಿಸಿದಾಗ, ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಂಡು, ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಿ, ತಮ್ಮ ಮಾನ ಮರ್ಯಾದೆಗಳನ್ನು ಉಳಿಸಿಕೊಳ್ಳುವುದು ಒಳ್ಳೆಯದು ಅನಿಸುತ್ತದೆ.

ಅಂದ ಹಾಗೆ ಅಮೆರಿಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ನೋಡುತ್ತಿದ್ದರೆ, ಭಾರತದಲ್ಲಿ ಹಾಲಿ ಪ್ರಧಾನಮಂತ್ರಿಯು ಹೊಸ ಪ್ರಧಾನಮಂತ್ರಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಏನಾಗಬಹುದು? ಇದರ ಬಗ್ಗೆ ಭಾರತದ ಸಂವಿಧಾನ ಮತ್ತು ಕಾನೂನು ಏನು ಹೇಳುತ್ತದೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

1. ಸುಪ್ರೀಂಕೋರ್ಟ್‌ನಲ್ಲಿ ಈ ಚುನಾವಣೆ ಫಲಿತಾಂಶ ರದ್ದುಗೊಳಿಸುವಂತೆ ಅಥವಾ ತೀರ್ಪು ವಿಳಂಬವಾಗುವಂತೆ ನೋಡಿಕೊಳ್ಳುವುದು. ಆದರೆ ಬಹಳಷ್ಟು ರಾಜ್ಯಗಳಲ್ಲಿ ನ್ಯಾಯಾಲಯಗಳು ಟ್ರಂಪ್ ಅವರ ಚುನಾವಣಾ ವ್ಯಾಪಕ ಅವ್ಯವಹಾರ ಆರೋಪಗಳನ್ನು ಸಾಕ್ಷ್ಯಾಧಾರದ ಕೊರತೆಯ ಮೇರೆಗೆ ವಜಾಗೊಳಿಸಿವೆ. ಇದು ಟ್ರಂಪ್‌ಗೆ ಭಾರಿ ಹಿನ್ನಡೆ ತಂದಿದೆ.

2.ರಾಜ್ಯಗಳು ಕಳುಹಿಸಿದ ಫಲಿತಾಂಶವನ್ನು ಅಮೆರಿಕದ ಸಂಸತ್ತು, ಅಂದರೆ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಧಿಕೃತಗೊಳಿಸಬೇಕು. ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷವು ಮೆಜಾರಿಟಿ ಇದ್ದರೂ ಟ್ರಂಪ್ ಮಾತನ್ನು ಅವರ ಪಕ್ಷದ ಸೆನೆಟರ್‌ಗಳು ಕೇಳುವ ಸ್ಥಿತಿಯಲ್ಲಿಲ್ಲ. ಈಗಾಗಲೇ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳು ಒಬ್ಬೊಬ್ಬರಾಗಿ ಹೊರಬಂದು, ಮೌನ ಮುರಿದು ಟ್ರಂಪ್ ತಮ್ಮ ಸೋಲನ್ನು ತಕ್ಷಣವೇ ಒಪ್ಪಿಕೊಳ್ಳಬೇಕೆಂದು ಮತ್ತು ಬೈಡನ್‌ಗೆ ಅಧಿಕಾರ ಹಸ್ತಾಂತರ ಮಾಡಬೇಕೆಂದು ಬಹಿರಂಗ ಹೇಳಿಕೆಗಳನ್ನು ಕೊಡಲು ಪ್ರಾರಂಭಿಸಿದ್ದಾರೆ. ಹೀಗಾಗಿ, ಅಮೆರಿಕದ ಸಂಸತ್ತಿನಲ್ಲಿ ಟ್ರಂಪ್‌ಗೆ ಬೆಂಬಲ ಸಿಗುವ ಸಾಧ್ಯತೆ ಬಹಳ ಕಡಿಮೆ. ಟ್ರಂಪ್ ಮುಂದಿರುವ ಆಯ್ಕೆಗಳೇನು?
3. ಟ್ರಂಪ್ ಅವರು ಪೊಲೀಸ್ ಮತ್ತು ಮಿಲಿಟರಿ ಪಡೆಗಳನ್ನು ಉಪಯೋಗಿಸಿ, ಕ್ಷಿಪ್ರಕ್ರಾಂತಿ ನಡೆಸಿ, ಎಮರ್ಜೆನ್ಸಿ ಘೋಷಿಸಿ, ಸರ್ವಾಧಿಕಾರಿಯಾಗಿ ತಮ್ಮ ಅಧಿಕಾರವನ್ನು ಮುಂದುವರಿಸಬಹುದು. ಆದರೆ ಆ ಸಾಧ್ಯತೆ ಅತಿ ಕಡಿಮೆ. ಅಮೆರಿಕದ ಇತಿಹಾಸ ದಲ್ಲಿ ಇಂತಹ ಘಟನೆ ನಡೆದೇ ಇಲ್ಲ. ಆ ರೀತಿ ಆಗಲು ಇದು ಪಾಕಿಸ್ತಾನ ಅಥವಾ ಆಫ್ರಿಕಾದ ನೈಜೀರಿಯಾದಂತಹ ಬನಾನಾ ರಿಪಬ್ಲಿಕ್ ಅಲ್ಲ. ಕೆಲ ತಿಂಗಳ ಹಿಂದೆ ಚುನಾವಣೆಗೂ ಮೊದಲೇ ಅಮೆರಿಕದ ಮಿಲಿಟರಿಯ ಮುಖ್ಯಸ್ಥರು, ಚುನಾವಣಾ ಫಲಿತಾಂಶದ ವಿವಾದ, ಸುಪ್ರೀಂಕೋರ್ಟ್ ಮತ್ತು ಸಂಸತ್ತಿಗೆ ಬಿಟ್ಟಿದ್ದು. ಇದರಲ್ಲಿ ಮಿಲಿಟರಿ ಯಾವ ಕಾರಣಕ್ಕೂ ಭಾಗ ವಹಿ ಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಹೀಗಾಗಿ ಒಂದು ವೇಳೆ ಟ್ರಂಪ್ ಕ್ಷಿಪ್ರಕ್ರಾಂತಿ ನಡೆಸಲು ಪ್ರಯತ್ನಿಸಿದರೆ ಅವರಿಗೆ ಪೊಲೀಸ್ ಮತ್ತು ಮಿಲಿಟರಿ ಪಡೆಗಳಿಂದ ಬೆಂಬಲ ದೊರೆಯುವ ಸಾಧ್ಯತೆ ವಿರಳ.
4. ಈಗಿನ ಅಧ್ಯಕ್ಷರ ಅಧಿಕೃತ ಟ್ವಿಟರ್ ಖಾತೆಯನ್ನು ಜನವರಿ 20ರಂದು ಜೋ ಬೈಡನ್‌ಗೆ ಹಸ್ತಾಂತರಿಸುವುದಾಗಿ ಟ್ವಿಟರ್ ಸಂಸ್ಥೆ ಪ್ರಕಟಿಸಿದೆ. ಹಾಲಿ ಅಧ್ಯಕ್ಷ ಟ್ರಂಪ್‌ಗೆ ಹೆದರದ ಈ ಸಂಸ್ಥೆಯ ಧೈರ್ಯವನ್ನು ನಾವು ಮೆಚ್ಚಲೇಬೇಕು.
5. ಜನವರಿ 20ರಂದು ಹೊಸ ಅಧ್ಯಕ್ಷ ಜೋ ಬೈಡನ್ ಅವರು ಸಿಕ್ರೆಟ್ ಸರ್ವಿಸ್ ಏಜೆಂಟರಿಗೆ ಟ್ರಂಪ್ ಅವರನ್ನು ಶ್ವೇತಭವನದಿಂದ ಹೊರದಬ್ಬುವಂತೆ ಆದೇಶಿಸಬಹುದು. ಅಥವಾ ಜೋ ಬೈಡನ್ ಶ್ವೇತಭವನದ ಬದಲಿಗೆ ಬೇರೆ ಯಾವುದೋ ಸ್ಥಳದಿಂದ ಅಧಿಕಾರ ನಡೆಸಬಹುದು.