Sunday, 15th December 2024

ಚುನಾವಣೆ ಸಂದರ್ಭದಲ್ಲೇ ಟ್ರಂಪ್’ಗೆ ತೆರಿಗೆ ವಂಚನೆ ಕಂಟಕ

ವಾಷಿಂಗ್ಟನ್: ಅಮೆರಿಕದ ಖ್ಯಾತ ಪತ್ರಿಕೆ ‘ದಿ ನ್ಯೂಯಾರ್ಕ್‌ ಟೈಮ್ಸ್‌ ‘ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತೆರಿಗೆ ವಂಚಿಸಿದ್ದಾರೆ ಎಂದು ಆರೋಪ ಮಾಡಿದೆ.

ತನ್ನ ವರದಿಯೊಂದನ್ನು ಪ್ರಕಟಿಸಿರುವ ದಿ ನ್ಯೂಯಾರ್ಕ್‌ ಟೈಮ್ಸ್, 2016ರಲ್ಲಿ ಟ್ರಂಪ್‌ ಶ್ವೇತಭವನ ಪ್ರವೇಶಿಸಿದಾಗ ಅವರು ಆ ವರ್ಷ (2016-17) 750 ಡಾಲರ್ ‌(ಸುಮಾರು 55,000 ರೂ.) ತೆರಿಗೆ, 2017ರಲ್ಲಿಯೂ 750 ಡಾಲರ್‌ ತೆರಿಗೆ ಮಾತ್ರ ಪಾವತಿಸಿದ್ದರು.

ವರದಿಯ ಪ್ರಕಾರ ಕಳೆದ 15 ವರ್ಷಗಳಲ್ಲಿ 10 ವರ್ಷ ಅವರು ಯಾವುದೇ ತೆರಿಗೆ ಪಾವತಿಸಿಲ್ಲ. ಟ್ರಂಪ್‌ ಎರಡನೇ ಬಾರಿಗೆ ಚುನಾವಣಾ ರಂಗದಲ್ಲಿ ಸ್ಪರ್ಧಿಸುತ್ತಿರುವಾಗ ತೆರಿಗೆ ಪಾವತಿಗೆ ಸಂಬಂಧಿಸಿದ ವಿಷಯ ಬಂದಿದೆ. ಇದು ಟ್ರಂಪ್‌ಗೆ ನುಂಗಲಾರದ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವರದಿಯನ್ನು ಟ್ರಂಪ್‌ ಸುಳ್ಳು ಎಂದಿದ್ದು, ತಮ್ಮ ವೈಯಕ್ತಿಕ ಹಣಕಾಸಿನ ವಿವರಗಳನ್ನು ಬಿಡುಗಡೆ ಮಾಡುವುದು ಅನಿವಾರ್ಯ ವಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ರಿಚರ್ಡ್‌ ನಿಕ್ಸನ್‌ (1969-74)ರಿಂದ ಬರಾಕ್‌ ಒಬಾಮ (2008-16)ರ ವರೆಗಿನ ಅಧ್ಯಕ್ಷರು ವೈಯಕ್ತಿಕ ಹಣಕಾಸು ಖಾತೆಗಳ ವಿವರಗಳನ್ನು ನೀಡಿದ್ದಾರೆ. ಟ್ರಂಪ್‌ ಅವರ ತೆರಿಗೆ ರಿಟರ್ನ್ಸ್ 2016ರ ಚುನಾವಣೆಯಲ್ಲಿ ಒಂದು ಪ್ರಮುಖ ವಿಷಯವಾಗಿತ್ತು.

ಅಧ್ಯಕ್ಷೀಯ ಚುನಾವಣೆಯ ಸಂದರ್ಭ ಅಮೆರಿಕದಲ್ಲಿ ಸಾಮಾನ್ಯವಾಗಿ ಪ್ರತಿಸ್ಪರ್ಧಿಯ ಜತೆ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತವೆ. ಇದನ್ನು traditional presidential debate ಎಂದು ಕರೆಯಲಾಗುತ್ತದೆ. ಇದು ಸಹಜವಾಗಿ ಟ್ರಂಪ್‌ ಅವರಿಗೆ ಆರಂಭಿಕ ಹಿನ್ನಡೆ ಎಂದೇ ಪರಿಗಣಿಸಲಾಗಿದೆ. ಮೊದಲ ಚರ್ಚೆ ಸೆಪ್ಟೆಂಬರ್‌ 29 ರಂದು ಓಹಿಯೋದಲ್ಲಿ ನಡೆಯಲಿದೆ. ಎರಡನೇ ಚರ್ಚೆ ಅಕ್ಟೋಬರ್‌ 15ರಂದು ಮತ್ತು ಮೂರನೆಯದು ಅಕ್ಟೋಬರ್‌ 22ರಂದು ನಡೆಯಲಿದೆ. ಏತನ್ಮಧ್ಯೆ ಡೆಮಾಕ್ರಟಿಕ್‌ ಅಭ್ಯರ್ಥಿ ಜೋ ಬಿಡನ್‌ ಅವರೂ ಈ ವರದಿಯ ಕುರಿತಾಗಿ ಟ್ರಪ್‌ ಮೇಲೆ ಆರೋಪಗಳು ಸುರಿಮಳೆಗೈಯುತ್ತಿದ್ದಾರೆ.

ಟ್ರಂಪ್‌ , 1970ರ ಬಳಿಕ ತಮ್ಮ ತೆರಿಗೆ ರಿಟರ್ನ್ ಅನ್ನು ಬಹಿರಂಗಗೊಳಿಸದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದ್ದಾರೆ.