Thursday, 12th December 2024

ನಾಳೆಯಿಂದ ಫ್ಲೋರಿಡಾದಲ್ಲಿ ಟ್ರಂಪ್ ಚುನಾವಣಾ ಪ್ರಚಾರ

ವಾಷಿಂಗ್ಟನ್: ಕೋವಿಡ್ ಸೋಂಕು ತಗುಲಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ನಾಳೆಯಿಂದ ಫ್ಲೋರಿಡಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ.

ನಾಳೆ ಸಂಜೆ ಫ್ಲೋರಿಡಾದ ಸ್ಯಾನ್‍ಫೋರ್ಡ್ ನಲ್ಲಿ ಮೇಕ್‍ ಅಮೆರಿಕ-ಗ್ರೇಟ್ ಎಗೈನ್ ಹೆಸರಿನ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಅಧ್ಯಕ್ಷರು ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಾದಿಯಲ್ಲಿದ್ದಾರೆ ಎಂದು ವೈದ್ಯ ಸೀನ್ ಕಾನ್ಲೆ ಹೇಳಿದ್ದಾರೆ.

ಕೋವಿಡ್ ವೈರಸ್ ದೃಢಪಟ್ಟ ಬಳಿಕ ಚಿಕಿತ್ಸೆ ಪಡೆಯಲು ಟ್ರಂಪ್ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ದಾಖಲಾಗಿದ್ದರು.