Thursday, 12th December 2024

ಟ್ರಂಪ್ 14, ಪ್ರತಿಸ್ಪರ್ಧಿ ಬಿಡೆನ್ 13 ರಾಜ್ಯಗಳಲ್ಲಿ ಮುನ್ನಡೆ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಜಿದ್ದಾಜಿದ್ದಿನಿಂದ ನಡೆದಿದ್ದು, ಎರಡನೇ ಬಾರಿಗೆ ಆಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ 14 ಹಾಗೂ ಪ್ರತಿಸ್ಪರ್ಧಿ ಜೊಯಿ ಬಿಡೆನ್ 13 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮಂಗಳವಾರ ತಡರಾತ್ರಿಯವರೆಗೆ ಮತದಾನ ನಡೆದಿದ್ದು, ಡೆಮೊಕ್ರೆಟಿಕ್ ಪಕ್ಷದ ಜೊಯಿ ಬಿಡೆನ್ 13 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೊನಾಲ್ಡ್ ಟ್ರಂಪ್ 14 ರಾಜ್ಯಗಳಲ್ಲಿ ಗೆಲುವು ಹಾಗೂ ಒಂದರಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಬಿಡೆನ್ ತವರೂರಾದ ಡೆಲೆವೆರೆ, ನ್ಯೂಯಾರ್ಕ್, ವಾಷ್ಟಿಂಗ್ಟನ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಎಲ್ಲವೂ 2016ರಲ್ಲಿ ಹಿಲೇರಿ ಕ್ಲಿಂಟನ್ ಗೆಲುವು ಪಡೆದಿದ್ದ ಪ್ರದೇಶಗಳು ಎಂಬುದು ಮುಖ್ಯ. ಆದರೆ ಒಟ್ಟಾರೆ ಮತಗಳ ಪೈಕಿ ಬಿಡೆನ್ 131 ಹಾಗೂ ಟ್ರಂಪ್ 104 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ.