Thursday, 19th September 2024

ಜನತೆಯ ಸೇವೆ ಸಲ್ಲಿಸಿರುವುದು ನನ್ನ ಪೂರ್ವಜನ್ಮ ಸುಕೃತ: ಟ್ರಂಪ್ ವಿದಾಯ ಭಾಷಣ

ವಾಷಿಂಗ್ಟನ್: ಅಮೆರಿಕ ದೇಶವನ್ನು ಸುರಕ್ಷಿತ ಮತ್ತು ಸಮೃದ್ಧವಾಗಿರಿಸುವಲ್ಲಿ ಜೋ ಬೈಡೆನ್ ಅವರಿಗೆ ಎಲ್ಲ ರೀತಿ ಸಹಕಾರ ನೀಡುವುದಾಗಿ ಹಾಗೂ ಅವರ ಯಶಸ್ಸಿಗೆ ಪ್ರಾರ್ಥಿಸುವುದಾಗಿ ಡೊನಾಲ್ಡ್ ಟ್ರಂಪ್ ತಮ್ಮ ವಿಡಿಯೋ ವಿದಾಯ ಸಂದೇಶದಲ್ಲಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಅಮೆರಿಕದ ಜನತೆ ಎಂದಿಗಿಂತಲೂ ಎಚ್ಚರಿಕೆಯಿಂದ ಒಂದಾಗಿ ಗುರಿ ಮುಟ್ಟಬೇಕು ಹಾಗೂ ಪಕ್ಷಪಾತ ಮರೆತು ಮುಂದುವರಿಯಬೇಕು ಎಂದರು. ಟ್ರಂಪ್ ಅವರು ಅಧ್ಯಕ್ಷರಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಜನತೆಯ ಸೇವೆ ಸಲ್ಲಿಸಿರುವುದು ನನ್ನ ಪೂರ್ವಜನ್ಮ ಸುಕೃತ. ಅಧ್ಯಕ್ಷ ಪದವಿಗೆ ನೀಡಿರುವ ಅಸಾಧಾರಣ ಸವಲತ್ತುಗಳಿಗೆ ಅನಂತ ಧನ್ಯವಾದಗಳು.

46ನೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜೋ ಬಿಡೆನ್ ಅವರಿಗೆ ತುಂಬು ಹೃದಯದ ಶುಭಾಶಯಗಳನ್ನು ತಿಳಿಸಿದ್ದಲ್ಲದೆ, ಈ ಮಹತ್ವದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *