Sunday, 15th December 2024

ಟರ್ಕಿಯಲ್ಲಿ 7.8 ತೀವ್ರತೆ ಪ್ರಬಲ ಭೂಕಂಪ

ಅಂಕಾರ (ಟರ್ಕಿ): ಸೋಮವಾರ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ನೆರೆಯ ಸಿರಿಯಾ ದಲ್ಲೂ ತೀವ್ರ ಹಾನಿಯುಂಟಾಗಿದೆ.

ಟರ್ಕಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿರುವುದಾಗಿ ಗೊತ್ತಾಗಿದೆ. ಟರ್ಕಿಯಲ್ಲಿ ದುರಂತದಿಂದಾಗಿ 76 ಮಂದಿ ಮೃತಪಟ್ಟಿದ್ದರು, 440 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

ಸಿರಿಯಾದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶ ಮತ್ತು ಬಂಡುಕೋರ ಬಣದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ 50ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದಲ್ಲಿ ಪರಿಸ್ಥಿತಿ ವಿನಾಶಕಾರಿ ಯಾಗಿದೆ ಎಂದು ವರದಿಗಳಾಗಿವೆ.