Thursday, 12th December 2024

ಸ್ಟುಡಿಯೋ ಸೆಟ್ ಬಿದ್ದು ಟಿವಿ ಆಂಕರ್’ಗೆ ಗಾಯ

ಕೊಲಂಬಿಯಾ : ಇಎಸ್‌ಪಿಎನ್‌ ರೇಡಿಯೋ ನ್ಯೂಸ್ ಚಾನೆಲ್ ನ ಲೈವ್ ನ್ಯೂಸ್ ಪ್ರಸಾರದ ವೇಳೆ ಸ್ಟುಡಿಯೋ ಸೆಟ್ ನ ಒಂದು ಭಾಗ ಬಿದ್ದ ಕಾರಣ ಕೊಲಂಬಿಯಾದ ಟಿವಿ ಆಂಕರ್ ಒಬ್ಬರು ಗಾಯಗೊಂಡರು.

ಕೊಲಂಬಿಯಾದ ಪತ್ರಕರ್ತ ಕಾರ್ಲೋಸ್ ಆರ್ಡುಜ್ ಅದೃಷ್ಟವಶಾತ್ ಜೀವ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದು, ವೀಕ್ಷಣೆ ಪಡೆದುಕೊಂಡಿದೆ.

ಕ್ರೀಡಾ ವಿಶ್ಲೇಷಕ ಕುರ್ಚಿಯ ಮೇಲೆ ಕುಳಿತಿದ್ದು, ಸೆಟ್ ನ ಒಂದು ಭಾಗ ಬೆನ್ನಿನ ಮೇಲೆ ಏಕಾಏಕಿ ಡಿಕ್ಕಿ ಬಿದ್ದ ಪರಿಣಾಮ ಆತನ ಮುಖ ಮೇಜಿಗೆ ಗುದ್ದಿರುವ ವಿಡಿಯೋ ವೈರಲ್ ಆಗಿದೆ. ಶೋನ ಆತಿಥೇಯರು ಆಘಾತಗೊಂಡಂತೆ ಕಂಡುಬಂದರು.