ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ಅನ್ನು ಬ್ಯಾನ್ ಮಾಡಲಾಗಿದೆ. ರಾಷ್ಟ್ರೀಯ ಭದ್ರತೆ ಕಾರಣವನ್ನು ಹೇಳಿ ಅಲ್ಲಿ ಎಕ್ಸ್ನ್ನು ಬ್ಯಾನ್ ಮಾಡಲಾಗಿದೆ.
ಎಲೋನ್ ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್ ಮೇಲಿನ ನಿಷೇಧ ರದ್ದುಗೊಳಿಸುವಂತೆ ಪಾಕಿಸ್ತಾನದ ಸಿಂಧ್ ಹೈಕೋರ್ಟ್ (ಎಸ್‌ಎಚ್‌ಸಿ) ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವರದಿಯ ಪ್ರಕಾರ, ಒಂದು ವಾರದೊಳಗೆ ತನ್ನ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ನ್ಯಾಯಾಲಯವು ಪಾಕಿಸ್ತಾನ ಸರ್ಕಾರವನ್ನು ಕೇಳಿದೆ.
ಪಾಕಿಸ್ತಾನ ಸರ್ಕಾರವು ಫೆಬ್ರವರಿಯಲ್ಲಿಯೇ ಎಕ್ಸ್ನ್ನು ನಿಷೇಧಿಸುವುದಾಗಿ ಹೇಳಿತ್ತು. ಇದೀಗ ಈ ನಿಷೇಧವನ್ನು ಅಧಿಕೃತವಾಗಿ ದೃಢಪಡಿಸಿದೆ.
ಪಾಕಿಸ್ತಾನ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, X ಪ್ಲಾಟ್‌ಫಾರ್ಮ್‌ನ ದುರುಪಯೋಗದ ಬಗ್ಗೆ ತಿಳಿಸಿದೆ. ಪಾಕಿಸ್ತಾನದಲ್ಲಿ ಎಕ್ಸ್ ಜನರಿಗೆ ಸಾಮಾಜಿಕ ಜಾಲತಾಣ ನೀಡುವ ಭದ್ರತೆಯಲ್ಲಿ ವಿಫಲಗೊಂಡಿದೆ. ಈ ಹಿಂದೆ ಈ ಬಗ್ಗೆ ಎಕ್ಸ್ಗೆ ತಿಳಿಸಿತ್ತು. ಇಲ್ಲಿಯವರೆಗೆ ಇದಕ್ಕೆ ಯಾವುದೇ ಪರಿಹಾರವನ್ನು ತಂದುಕೊಟ್ಟಿಲ್ಲ ಎಂದು ಹೇಳಿದ್ದಾರೆ.