ಪಕ್ಷದ ಸುಮಾರು 160,000 ಸದಸ್ಯರಿಗೆ ಅಂಚೆ ಮತಪತ್ರಗಳನ್ನು ಇನ್ನೂ ನೀಡಿಲ್ಲ. ಇದರಿಂದ ಅವರು ಆಗಸ್ಟ್ನಲ್ಲಿ ತಡವಾಗಿ ಆಗಮಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ, ಮತಪತ್ರಗಳನ್ನು ಸೋಮವಾರದಿಂದ ಎಲ್ಲರಿಗೂ ಕಳುಹಿಸಲಾಗು ವುದು ಎಂದು ಪಕ್ಷ ಹೇಳಿದೆ. ಹ್ಯಾಕಿಂಗ್ ಬೆದರಿಕೆ ಹಿನ್ನೆಲೆಯಲ್ಲಿ ಮತಯಂತ್ರದ ಬದಲು ಮತಪತ್ರದ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಅಂತಿಮ ಸುತ್ತಿನ ಚುನಾವಣೆ ಬಾಕಿ ಇದೆ. ಕಣದಲ್ಲಿ ಮಾಜಿ ಹಣಕಾಸು ಸಚಿವ ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ಲೀಸ್ ಟ್ರಾಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.