Thursday, 12th December 2024

ಮತಯಂತ್ರ ಹ್ಯಾಕ್: ಯುಕೆಯಲ್ಲಿ ಮತದಾನ ವಿಳಂಬ

ಲಂಡನ್​: ಸೈಬರ್​ ದಾಳಿಕೋರರು ಮತಯಂತ್ರವನ್ನು ಹ್ಯಾಕ್​ ಮಾಡಿ ಸದಸ್ಯರ ಮತವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಲಿದೆ.

ಈ ಮೂಲಕ ಮುಂದಿನ ಯುನೈಟೆಡ್​ ಕಿಂಗ್​ಡಮ್​ ಪ್ರಧಾನಿ ಸ್ಥಾನಕ್ಕೆ ನಡೆಯ ಲಿರುವ ಚುನಾವಣೆಯು ವಿಳಂಬವಾಗಲಿದೆ.

ಪಕ್ಷದ ಸುಮಾರು 160,000 ಸದಸ್ಯರಿಗೆ ಅಂಚೆ ಮತಪತ್ರಗಳನ್ನು ಇನ್ನೂ ನೀಡಿಲ್ಲ. ಇದರಿಂದ ಅವರು ಆಗಸ್ಟ್​ನಲ್ಲಿ ತಡವಾಗಿ ಆಗಮಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ, ಮತಪತ್ರಗಳನ್ನು ಸೋಮವಾರದಿಂದ ಎಲ್ಲರಿಗೂ ಕಳುಹಿಸಲಾಗು ವುದು ಎಂದು ಪಕ್ಷ ಹೇಳಿದೆ. ಹ್ಯಾಕಿಂಗ್​ ಬೆದರಿಕೆ ಹಿನ್ನೆಲೆಯಲ್ಲಿ ಮತಯಂತ್ರದ ಬದಲು ಮತಪತ್ರದ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೋರಿಸ್​​ ಜಾನ್ಸನ್​​ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಅಂತಿಮ ಸುತ್ತಿನ ಚುನಾವಣೆ ಬಾಕಿ ಇದೆ. ಕಣದಲ್ಲಿ ಮಾಜಿ ಹಣಕಾಸು ಸಚಿವ ಹಾಗೂ ಇನ್ಫೋಸಿಸ್​ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್​ ಮತ್ತು ವಿದೇಶಾಂಗ ಕಾರ್ಯದರ್ಶಿ ಲೀಸ್​ ಟ್ರಾಸ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.