ಕೃತಕ ಬುದ್ಧಿಮತ್ತೆಯಲ್ಲಿ ಎಂಎಸ್ಸಿ (MSc in Artificial Intelligence) ಮಾಡುವ ಇಚ್ಛೆ ಇದೆಯೇ? ಯುಕೆಯ ಶೆಫೀಲ್ಡ್ ವಿಶ್ವವಿದ್ಯಾನಿಲಯವು (UK University) ಎಂಎಸ್ಸಿ (MSc) ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗಾಗಿ (Artificial Intelligence) ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 2025ರ ಮೇ 12ರಂದು ಯುಕೆ ಸಮಯ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶವಿದೆ.
ಕೃತಕ ಬುದ್ಧಿಮತ್ತೆಯಲ್ಲಿನ ಎಂಎಸ್ಸಿಯಲ್ಲಿ ಕೇವಲ ಎಐ ಕುರಿತಾದ ಪರಿಕಲ್ಪನೆಗಳು ಮಾತ್ರ ಇರುವುದಿಲ್ಲ. ಹೆಚ್ಚಿನ ಪ್ರಮಾಣದ ಡೇಟಾವನ್ನು ನಿರ್ವಹಿಸುವಲ್ಲಿ ಪ್ರಾಯೋಗಿಕ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಒದಗಿಸಲಾಗುತ್ತದೆ. ಗಣಿತ, ಅರ್ಥಶಾಸ್ತ್ರ, ಎಂಜಿನಿಯರಿಂಗ್, ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲಿ ಪದವಿ ಪಡೆದವರು, ಪ್ರಸ್ತುತ ಉದ್ಯೋಗದಲ್ಲಿರುವ ವೃತ್ತಿಪರರಿಗೆ ಅನುಕೂಲವಾಗುವಂತೆ ಈ ಕೋರ್ಸ್ ಅನ್ನು ರೂಪಿಸಲಾಗಿದೆ.
ಅರ್ಹತೆ ಏನು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ ಶೇ. 60 ಅಂಕಗಳೊಂದಿಗೆ 3 ಅಥವಾ 4 ವರ್ಷದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅರ್ಜಿದಾರರ ಐಇಎಲ್ ಟಿಎಸ್ ಅಂಕ ಕನಿಷ್ಠ 6.5 ಇರಬೇಕು ಮತ್ತು ಪ್ರತಿ ವಿಭಾಗದಲ್ಲಿ 6ಕ್ಕಿಂತ ಕಡಿಮೆ ಇರಬಾರದು ಅಥವಾ ಸಮಾನ ಅರ್ಹತೆಯ ಇಂಗ್ಲಿಷ್ ಭಾಷಾ ಪ್ರಾವಿಣ್ಯತೆ ಪಡೆದಿರಬೇಕು.
ಇತರೆ ಕೋರ್ಸ್‌ಗಳು
ಶೆಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಹಲವು ವಿಷಯಗಳನ್ನು ಕಲಿಯಬಹುದು. ಇಲ್ಲಿ ವಿವಿಧ ಪದವಿ ಕೋರ್ಸ್‌ಗಳು ಲಭ್ಯವಿದೆ. ಕೃತಕ ಬುದ್ಧಿಮತ್ತೆ, ಅರ್ಥಶಾಸ್ತ್ರ, ಗಣಿತಶಾಸ್ತ್ರ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ರಸಾಯನಶಾಸ್ತ್ರ, ಎಂಜಿನಿಯರಿಂಗ್ ಕೋರ್ಸ್‌ಗಳನ್ನು ವಿದ್ಯಾರ್ಥಿ ವೇತನದೊಂದಿಗೆ ಪೂರ್ಣಗೊಳಿಸಬಹುದು.
ವಿಶ್ವವಿದ್ಯಾನಿಲಯವು 75 ಅಂತಾರಾಷ್ಟ್ರೀಯ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿದೆ. ಬೋಧನಾ ಶುಲ್ಕಕ್ಕಾಗಿ ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೆ 10.97 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
UPSC Recruitment 2024: ಯುಪಿಎಸ್‌ಸಿಯ 457 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ
ಮೊದಲು ಅರ್ಜಿ ಸಲ್ಲಿಸಿದವರಿಗೆ ಪ್ರಾಶಸ್ತ್ಯವಿರುವುದರಿಂದ ಆಸಕ್ತ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಕೋರ್ಸ್ ಕುರಿತು ಸಂಪೂರ್ಣ ಮಾಹಿತಿಗಾಗಿ ಶೆಫೀಲ್ಡ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಅನ್ನು ನೋಡಬಹುದು.