Wednesday, 6th November 2024

ಕಾರು ಅಪಘಾತದಲ್ಲಿ ಪಾರಾದ ಉಕ್ರೇನ್ ಅಧ್ಯಕ್ಷ

ಕೈವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾರು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಝೆಲೆನ್ಸ್ಕಿಯ ವಕ್ತಾರ ಸೆರ್ಹಿ ನೈಕಿಫೊರೊವ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಧ್ಯಕ್ಷರ ಕಾರಿಗೆ ಕಾರೊಂದು ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದರು. ಅಪಘಾತದ ನಂತರ, ವೈದ್ಯರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯನ್ನು ಪರೀಕ್ಷಿಸಿದ್ದಾರೆ. ಈ ವೇಳೆ ವೈದ್ಯರು ಝೆಲೆನ್ಸ್ಕಿಯ ಚಾಲಕನ ವೈದ್ಯಕೀಯ ಪರೀಕ್ಷೆಯನ್ನು ಸಹ ನಡೆಸಿದ್ದಾರೆನ್ನಲಾಗಿದೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ವಕ್ತಾರ ನೈಕಿಫೊರೊವ್ ಅವರು ಅಪಘಾತದ ಬಗ್ಗೆ ಕಾನೂನು ಜಾರಿ ಸಂಸ್ಥೆ ಸಂಪೂರ್ಣ ತನಿಖೆ ನಡೆಸುತ್ತದೆ ಎಂದು ಹೇಳಿದರು. ಅಪಘಾತದ ಎಲ್ಲಾ ಸಂದರ್ಭಗಳನ್ನು ತನಿಖೆ ಮಾಡಲಾಗುತ್ತದೆ. ಅಧ್ಯಕ್ಷೀಯ ಬೆಂಗಾ ವಲು ಪಡೆ ಕೈವ್ ಮೂಲಕ ಹಾದು ಹೋಗುತ್ತಿದ್ದಾಗ ಉಕ್ರೇನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ಕಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಪಘಾತದಲ್ಲಿ ಅಧ್ಯಕ್ಷರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಈಗ ಹೊಸ ತಿರುವು ಪಡೆದುಕೊಂಡಿದೆ. ಉಕ್ರೇನ್ ರಷ್ಯಾಕ್ಕೆ ಆಳವಾದ ಹೊಡೆತವನ್ನು ನೀಡಿದೆ. ಅಲ್ಲದೇ ರಷ್ಯಾದ ಆಕ್ರಮಣದಿಂದ ದೇಶದ ಅನೇಕ ಭಾಗಗಳನ್ನು ವಿಮೋಚನೆಗೊಳಿಸಿದೆ. ಆರು ತಿಂಗಳ ಆಕ್ರಮಣದ ನಂತರ, ಉಕ್ರೇನ್ ಪಡೆಗಳು ಆಯಕಟ್ಟಿನ ನಗರವಾದ ಇಜಿಯಮ್ ಮತ್ತು ಖಾರ್ಕಿವ್ ಸೇರಿದಂತೆ ಹಲವಾರು ಭಾಗಗಳನ್ನು ಮರಳಿ ವಶಪಡಿಸಿಕೊಂಡವು.