ಪ್ರತಿ ವರ್ಷ ದಕ್ಷಿಣ ಆಫ್ರಿಕಾದ (South Africa) ಕೆಲವು ಪ್ರಾಂತ್ಯಗಳಲ್ಲಿ ಸಾವಿರಾರು ಯುವತಿಯರ ಕನ್ಯತ್ವ ಪರೀಕ್ಷೆ (virginity testing) ನಡೆಸಲಾಗುತ್ತದೆ. ಇದು ಇವರ ಸಂಪ್ರದಾಯದ (Unique Tradition) ಭಾಗವಾಗಿ ಹಲವಾರು ವರ್ಷಗಳಿಂದ ಆಚರಣೆಯಲ್ಲಿದೆ.
ಹೆಣ್ಣು ಮಕ್ಕಳು ನಿರ್ದಿಷ್ಟ ವಯಸ್ಸನ್ನು ತಲುಪಿದ ಮೇಲೆ ಆಕೆ ಕನ್ಯೆಯಾಗಿ ಉಳಿದಿದ್ದಾಳೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೆಲವರು ಇದನ್ನು ಸಂಸ್ಕೃತಿಯ ಆಚರಣೆ ಎಂದು ಗೌರವದಿಂದ ಕಾಣುತ್ತಾರೆ. ಇನ್ನು ಕೆಲವರು ಇದು ಹೆಣ್ಣು ಮಕ್ಕಳ ಶೋಷಣೆ ಎಂದು ವಾದಿಸುತ್ತಾರೆ. ಅದೇನೇ ಇರಲಿ ಇದನ್ನು ಗೌರವದಿಂದ ಕಾಣುವವರು ಇಂದಿಗೂ ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ.
ಬೇರೆಬೇರೆ ಕಡೆ ಇದನ್ನು ಬೇರೆಬೇರೆ ರೀತಿಯಾಗಿ ಪರೀಕ್ಷಿಸಲಾಗುತ್ತದೆ. ಕೆಲವು ಪ್ರಾಂತ್ಯಗಳಲ್ಲಿ ಜುಲು ಬುಡಕಟ್ಟಿನ ಹಿರಿಯರೊಬ್ಬರು ಕೈಗವಸು ಧರಿಸಿ ಯುವತಿಯರ ಯೋನಿ ಪರೀಕ್ಷೆ ನಡೆಸುತ್ತಾರೆ. ಹರೆಯದ ಹೆಣ್ಣು ಮಕ್ಕಳು ಸರದಿಯಲ್ಲಿ ನಿಂತು ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಾರೆ. ಕನ್ಯಾಪೊರೆ, ಯೋನಿಯ ಗಾತ್ರದ ಆಧಾರದ ಮೇಲೆ ಯುವತಿ ಕನ್ಯೆಯಾಗಿ ಉಳಿದಿದ್ದಾಳೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.
ಇನ್ನು ಕೆಲವೆಡೆ ಹುಲ್ಲು ಹಾಸಿನ ಮೇಲೆ ಕನ್ಯೆಯನ್ನು ಮಲಗಿಸಿ ಆಕೆಯ ಯೋನಿಯ ಗಾತ್ರವನ್ನು ಅಳೆಯಲಾಗುತ್ತದೆ. ಯೋನಿಯ ರಂಧ್ರ ದೊಡ್ಡದಾಗಿದ್ದರೆ ಆಕೆ ಕನ್ಯೆಯಾಗಿ ಉಳಿದಿಲ್ಲ ಎಂಬುದನ್ನು ನಿರ್ಧರಿಸಲಾಗುತ್ತದೆ.
ಇನ್ನೊಂದು ಕಡೆ ಸ್ವಲ್ಪ ಭಿನ್ನವಾದ ರೀತಿಯಲ್ಲಿ ಪರೀಕ್ಷೆ ನಡೆಯುತ್ತದೆ. ಇಲ್ಲಿ ಕನ್ಯತ್ವ ಪರೀಕ್ಷಕರು ಸಣ್ಣ ಕ್ಯಾಪ್ ನಲ್ಲಿ ದ್ರವವೊಂದನ್ನು ಹರೆಯದ ಹುಡುಗಿಯರ ಯೋನಿಯ ಒಳಗೆ ಸುರಿಯುತ್ತಾರೆ. ಕನ್ಯೆಯಾಗಿದ್ದರೆ ಆ ದ್ರವದ ಸ್ವಲ್ಪ ಭಾಗ ಮಾತ್ರ ಯೋನಿಯೊಳಗೆ ಹರಿಯುತ್ತದೆ. ಒಂದು ವೇಳೆ ಕನ್ಯೆಯಾಗಿ ಇಲ್ಲದೇ ಇದ್ದರೆ ಅ ದ್ರವವು ಸುಲಭವಾಗಿ ಯೋನಿಯೊಳಗೆ ಹರಿಯುತ್ತದೆ ಎಂದು ನಂಬಲಾಗಿದೆ.
Viral News: ಗೋಡೆಗೆ ಅಂಟಿಸಿದ ಬಾಳೆಹಣ್ಣಿನ ಕಲಾಕೃತಿಗೆ ಚಿನ್ನದ ಬೆಲೆ; ಹರಾಜಿನಲ್ಲಿ 12 ಕೋಟಿ ರೂ. ಪಡೆಯುವ ನಿರೀಕ್ಷೆ
ಹೆಚ್ಚಿನ ಹರೆಯದ ಹೆಣ್ಣು ಮಕ್ಕಳು ಕನ್ಯತ್ವವನ್ನು ಕಾಪಾಡಿಕೊಳ್ಳುವುದು ನಮ್ಮ ಗೌರವದ ಸಂಕೇತವೆಂದೇ ಇಲ್ಲಿ ಭಾವಿಸುತ್ತಾರೆ. ಹೀಗಾಗಿ ಇಂದಿಗೂ ಅನೇಕರು ಈ ಸಂಪ್ರದಾಯದಲ್ಲಿ ಅತ್ಯಂತ ಗೌರವದಿಂದ ಪಾಲ್ಗೊಳ್ಳುತ್ತಾರೆ.
ಕನ್ಯತ್ವ ಪರೀಕ್ಷೆಯಲ್ಲಿ ಕೇವಲ ಹೆಣ್ಣು ಮಕ್ಕಳ ಪರೀಕ್ಷೆ ಮಾತ್ರ ನಡೆಯುವುದಿಲ್ಲ. ಈ ಸಂದರ್ಭದಲ್ಲಿ ಹಾಡುಗಾರಿಕೆ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೇ ಹಿರಿಯ ಮಹಿಳೆಯರು ಹರೆಯದ ಹೆಣ್ಣು ಮಕ್ಕಳಿಗೆ ಬೋಧನೆಗಳನ್ನೂ ನೀಡುತ್ತಾರೆ.